ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿದೆ  ಹಲವು ಉದ್ಯೋಗಾವಕಾಶ: ಯಾರೆಲ್ಲ ಅರ್ಜಿ ಸಲ್ಲಿಸಬಹುದು? - Mahanayaka
12:06 PM Monday 8 - September 2025

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿದೆ  ಹಲವು ಉದ್ಯೋಗಾವಕಾಶ: ಯಾರೆಲ್ಲ ಅರ್ಜಿ ಸಲ್ಲಿಸಬಹುದು?

karnataka legislative assembly
01/11/2024

Karnataka Legislative Assembly Recruitment 2024 — ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.


Provided by

ಹೈದರಾಬಾದ್ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದ ಸೇರಿ ಒಟ್ಟು 37 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಖಾಲಿ ಇರುವ ಹುದ್ದೆಗಳ ಮಾಹಿತಿ ಹಾಗೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ವಿವರವನ್ನು ಇಲ್ಲಿ ವಿವರಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ಮಾಹಿತಿ :

ಆಂಗ್ಲ ಮತ್ತು ಕನ್ನಡ ವರದಿಗಾರರು 7 ಹುದ್ದೆಗಳು, ಕಂಪ್ಯೂಟರ್ ಆಪರೇಟರ್ 4 ಹುದ್ದೆಗಳು, ದಲಾಯತ್ 17 ಹುದ್ದೆಗಳು, ಸ್ವಿಪರ್ 4 ಹುದ್ದೆಗಳು, ಜೂನಿಯರ್ ಪ್ರೋಗ್ರಾಮರ್ 1 ಹುದ್ದೆ, ಕಿರಿಯ ಸಹಾಯಕ 1, ಮಸಾಜರ್  1 ಹಾಗೂ ಕಾರ್ಪೆಂಟರ್ ಒಂದು ಹುದ್ದೆ.

ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳ ವಿವರ :

ಈ ಮೇಲೆ ತಿಳಿಸಿರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಹುದ್ದೆಗಳಿಗೆ ಅನುಗುಣವಾಗಿ 4ನೇ ತರಗತಿಯಿಂದ ಪದವಿ ಮುಗಿಸಿರಬೇಕು.

ವಯೋಮಿತಿ — ನಿಗದಿಪಡಿಸಿದ ದಿನಾಂಕ 25 ನವೆಂಬರ್ 2024ಕ್ಕೆ ಕನಿಷ್ಠ 18 ರಿಂದ 35 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಕೆಗೆ ಅರ್ಜಿ ಶುಲ್ಕ –

* ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ವರ್ಗದವರು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ — 25 ನವೆಂಬರ್ 2024

ಅರ್ಜಿ ಸಲ್ಲಿಕೆಗೆ ಅವಶ್ಯಕ ಲಿಂಕ್ : kla.kar.nic.in


ಇನ್ನಷ್ಟು ಉದ್ಯೋಗ ಸುದ್ದಿಗಳು

https://www.mahanayaka.in/category/ಉದ್ಯೋಗ ವಾರ್ತೆ

ಇತ್ತೀಚಿನ ಸುದ್ದಿ