ಈ ವರ್ಷ ಶಾಲೆ ಪ್ರಾರಂಭ ಆಗುತ್ತಾ, ಇಲ್ವಾ? | ಕೊನೆಗೂ ಮಾಹಿತಿ ನೀಡಿದ ಶಿಕ್ಷಣ ಸಚಿವರು - Mahanayaka
11:19 AM Wednesday 20 - August 2025

ಈ ವರ್ಷ ಶಾಲೆ ಪ್ರಾರಂಭ ಆಗುತ್ತಾ, ಇಲ್ವಾ? | ಕೊನೆಗೂ ಮಾಹಿತಿ ನೀಡಿದ ಶಿಕ್ಷಣ ಸಚಿವರು

23/11/2020


Provided by

ಬೆಂಗಳೂರು: ಶಾಲೆ ಆರಂಭದ ಹಲವು ಗೊಂದಲಗಳ ನಡುವೆಯೇ ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಪ್ರಾರಂಭದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದು,  ಸೋಮವಾರ ಸಿಎಂ ನೇತೃತ್ವದಲ್ಲಿ ನಡೆದ ಚರ್ಚೆಯ ಬಳಿಕ ಈ ವರ್ಷ ಶಾಲೆ ಆರಂಭಿಸುವುದಿಲ್ಲ ಎಂದು ಹೇಳಿದ್ದಾರೆ.

ಶಾಲೆ ಆರಂಭದ ಕುರಿತು ಡಿಸೆಂಬರ್‌ ಮೂರನೇ ವಾರದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಪರಿಸ್ಥಿತಿ ನೋಡಿಕೊಂಡು ಮುಂದೆ ನಿರ್ಧಾರ ಮಾಡುತ್ತೇವೆ,  ‘ಸಂವೇದ’ ಮೂಲಕ ಹತ್ತನೇ ತರಗತಿ ಪರೀಕ್ಷೆ ಪಾಠ ಪೂರ್ಣಗೊಳ್ಳುತ್ತದೆ. ಜೀರೋ ಇಯರ್  ಎಂದು ಘೋಷಣೆ ಮಾಡಲ್ಲ. ಕೊನೆಯ ವರ್ಷ ಕೂಡ 1-9 ತರಗತಿವರೆಗೂ ಯಾವುದೇ ಪರೀಕ್ಷೆ ಇಲ್ಲದೆ ಪಾಸ್ ಮಾಡಿದ್ದೆವು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದಲ್ಲಿ ಎಸೆಸೆಲ್ಸಿ  ವಿದ್ಯಾರ್ಥಿಗಳ ಸಂಖ್ಯೆ 9,59,566 ಇದೆ. 5,70,126 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಯಲ್ಲಿದ್ದಾರೆ. ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಘೋಷಣೆ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹೈದ್ರಾಬಾದ್​ನಿಂದಲೇ ವಿಡಿಯೋ ಮೂಲಕ ಸಭೆಯಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ಡಿಸೆಂಬರ್​ನಲ್ಲಿ ಚಳಿಗಾಲ ಇರುವುದರಿಂದ, ಚಳಿ ಹೆಚ್ಚಾಗುವ ಸಂದರ್ಭ ಇರುವುದರಿಂದ, ಎರಡನೇ ಕೋವಿಡ್ ಅಲೆ ಮುನ್ಸೂಚನೆ ಇರುವ ಕಾರಣ ಡಿಸೆಂಬರ್​ನಲ್ಲಿ ಶಾಲಾ- ಕಾಲೇಜು ಬೇಡ ಎಂದು ತಿಳಿಸಿದ್ದಾರೆ ಎಂದು ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.



ಇತ್ತೀಚಿನ ಸುದ್ದಿ