2022-23ರ ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟ: ಯಾವಾಗ ಶಾಲೆ ಆರಂಭ? - Mahanayaka

2022-23ರ ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟ: ಯಾವಾಗ ಶಾಲೆ ಆರಂಭ?

school start
21/04/2022


Provided by

ಬೆಂಗಳೂರು:  ಪ್ರಸಕ್ತ ಶೈಕ್ಷಣಿಕ ವರ್ಷದ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಮೇ 16ರಿಂದ ಶಾಲೆಗಳು ಆರಂಭವಾಗಲಿದ್ದು,  ಈ ವರ್ಷ ಪೂರ್ಣ ಪ್ರಮಾಣದ ತರಗತಿಗಳು ನಡೆಯಲಿದೆ.

270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, ದಸರಾಗೆ 14 ದಿನ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಇಲಾಖೆ ಈ ಬಾರಿ ಹಮ್ಮಿಕೊಂಡಿದೆ.

ಮೇ 16ರಿಂದ ಶಾಲೆಗಳು ಆರಂಭ ವಾಗಲಿದ್ದು,  ಮೇ16ರಿಂದ 20ರವರೆಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಮೇ 17ರಿಂದ 31ವರೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಲಿದೆ.  ಮೇ 28 ಪೋಷಕರ ಸಭೆ, ಜೂನ್ 1ರಿಂದ ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ ದೊರೆಯಲಿದೆ.

ಅಕ್ಟೋಬರ್ 3ರಿಂದ 16 ದಸರಾ ರಜೆ, ಅಕ್ಟೋಬರ್ 17ರಿಂದ 25 ಅರ್ಧ ವಾರ್ಷಿಕ ಪರೀಕ್ಷೆ ಫೆ.23-2023ರಿಂದ 25ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆ, ಮಾರ್ಚ್ 23-2023ರಿಂದ 31ವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ.

ಈ ಶೈಕ್ಷಣಿಕ ವರ್ಷದಲ್ಲಿ  ವಿಶ್ವೇಶ್ವರಯ್ಯ ದಿನಾಚರಣೆ, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಕನಕದಾಸರ ಜಯಂತಿ, ಸಂವಿಧಾನ ದಿನಾಚರಣೆ, ವಿವೇಕಾನಂದ ಜಯಂತಿ ದಾರ್ಶನಿಕರ ಜಯಂತಿ ಆಚರಣೆಗೆ ಸೂಚನೆ ನೀಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನನ್ನನ್ನು ಜೈಲಿಗೆ ಕಳಿಸಬೇಕು ಅನ್ಕೊಂಡಿದ್ರು; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ

ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್

ಮನೆಯ ಮುಂದೆಯೇ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ

ಕಲ್ಲು ಸಕ್ಕರೆ ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳು ಮಾಯ!

ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್ | ಈ ಬಾರಿಯಾದರೂ ಮಾತು ಉಳಿಸಿಕೊಳ್ಳುತ್ತಾರಾ?

ಇತ್ತೀಚಿನ ಸುದ್ದಿ