ಬ್ರೇಕಿಂಗ್ ನ್ಯೂಸ್: ಎಸೆಸೆಲ್ಸಿ ಪರೀಕ್ಷಾ ದಿನಾಂಕ ಘೋಷಿಸಿದ ಸಚಿವ ಸುರೇಶ್ ಕುಮಾರ್ - Mahanayaka
12:50 PM Thursday 16 - October 2025

ಬ್ರೇಕಿಂಗ್ ನ್ಯೂಸ್: ಎಸೆಸೆಲ್ಸಿ ಪರೀಕ್ಷಾ ದಿನಾಂಕ ಘೋಷಿಸಿದ ಸಚಿವ ಸುರೇಶ್ ಕುಮಾರ್

suresh kumar
28/06/2021

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ದಿನಾಂಕವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇದೀಗ ಘೋಷಿಸಿದ್ದು, ಕೇವಲ 2 ದಿನಗಳಲ್ಲಿಯೇ ಎಸೆಸೆಲ್ಸಿ ಪರೀಕ್ಷೆಯನ್ನು ಮುಕ್ತಾಯ ಮಾಡಲು ಸರ್ಕಾರ ಮುಂದಾಗಿದೆ.


Provided by

ಜುಲೈ 19 ಮತ್ತು 22ರಂದು ಪರೀಕ್ಷೆ ನಡೆಯಲಿದ್ದು,  ಜು.19ರಂದು ಗಣಿತ, ಸಮಾಜ, ವಿಜ್ಞಾನ ಪರೀಕ್ಷೆಗಳು ನಡೆಯಲಿದೆ. 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆ ನಡೆಯಲಿದೆ.  ಎಲ್ಲ ಕೇಂದ್ರಗಳಲ್ಲಿ ಸಿಬ್ಬಂದಿ 8:30ಕ್ಕೆ ಹಾಜರಿರಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಜೂನ.30ರಂದು ಎಲ್ಲಾ ಶಾಲೆಗಳಲ್ಲಿಯೂ ಹಾಲ್ ಟಿಕೆಟ್ ವಿತರಣೆ ಮಾಡಲಾಗುವುದು. ಆನ್ ಲೈನ್ ನಲ್ಲಿಯೂ ಇದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ