ಕೊರೊನಾ ಚಿಕಿತ್ಸೆಗೆ ನಮ್ಮ ರಾಜ್ಯದಲ್ಲಿ ಲಕ್ಷ ಲಕ್ಷ ಬಿಲ್ | ಆಂಧ್ರಪ್ರದೇಶದಲ್ಲಿ ಫ್ರೀ ಚಿಕಿತ್ಸೆ - Mahanayaka
10:04 PM Sunday 28 - December 2025

ಕೊರೊನಾ ಚಿಕಿತ್ಸೆಗೆ ನಮ್ಮ ರಾಜ್ಯದಲ್ಲಿ ಲಕ್ಷ ಲಕ್ಷ ಬಿಲ್ | ಆಂಧ್ರಪ್ರದೇಶದಲ್ಲಿ ಫ್ರೀ ಚಿಕಿತ್ಸೆ

yediyurappa
11/05/2021

ಬೆಂಗಳೂರು:  “ಸರ್… ನನ್ನ ಅಪ್ಪನನ್ನು ಕಳ್ಕೊಂಡೆ, ಅಣ್ಣನನ್ನೂ ಕಳ್ಕೊಂಡೆ, ಸರ್ಜಾಪುರ ಅಗ್ರಾಹಾರ ಸಾಯಿತುಂಗಾ ಆಸ್ಪತ್ರೆಯಲ್ಲಿ ಅಣ್ಣನಿಗೆ 4 ಲಕ್ಷ ರೂಪಾಯಿ ಬಿಲ್ ಹಾಕಿದ್ರು. ನನ್ನ ತಂದೆಗೆ  2 ಲಕ್ಷ ರೂಪಾಯಿ ಬಿಲ್ ಮಾಡಿದರು. ಮನೆಯಲ್ಲಿ ಇನ್ನೂ ಮೂವರಿಗೆ ಸಿರಿಯಸ್ ಆಗಿದೆ. ಟ್ರೀಟ್ ಮೆಂಟ್ ಬಗ್ಗೆ ಯಾರೂ ಏನೂ ಹೇಳ್ತಾನೆ ಇಲ್ಲ. ಹೆಲ್ಪ್ ಲೈನ್ ಗೆ ಕರೆ ಮಾಡಿದರೆ, ಯಾರೂ ರಿಸಿವ್ ಮಾಡೋದೇ ಇಲ್ಲ” ಎಂದು ಕೊರೊನಾ ಹಾಗೂ ಆಸ್ಪತ್ರೆಗಳ ಧನದಾಹದಿಂದ ನೊಂದ ಮಂಜುನಾಥ್ ಅವರು ಹೇಳಿದ್ದಾರೆ.

ಫಸ್ಟ್ ನ್ಯೂಸ್ ಕನ್ನಡ ಸುದ್ದಿ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ಮಂಜುನಾಥ್ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅವನ್ಯಾವನೋ ತೇಜಸ್ವಿ ಸೂರ್ಯ ಮೊನ್ನೆ ಆಸ್ಪತ್ರೆಗೆ ಬಂದು ಎಗರಾಡಿದ. ಆದ್ರೆ, ಒಂದು ಹೆಲ್ಪ್ ಲೈನ್ ಇಲ್ಲ, ಸರ್… ಹೆಲ್ಪ್ ಲೈನ್ಗೇ  ಎಷ್ಟು ಕರೆ ಮಾಡಿದರೂ ರಿಸಿವ್ ಮಾಡ್ತಾನೇ ಇಲ್ಲ ಸರ್… “ಎಂದು ಬೇಸರ ವ್ಯಕ್ತಪಡಿಸಿದರು.

“ನನ್ನ ಸ್ನೇಹಿತರೊಬ್ಬರ ತಂದೆಗೆ ಆಂಧ್ರಪ್ರದೇಶದಲ್ಲಿ ಚಿಕಿತ್ಸೆ ನೀಡಲಾಯ್ತು. ಒಂದು ರೂಪಾಯಿ ಹಣ ತೆಗೆದುಕೊಳ್ಳದೇ ಉಚಿತ ಟ್ರೀಟ್ ಮೆಂಟ್ ನೀಡಿದ್ದಾರೆ. ಕರ್ನಾಟಕ ಸರ್ಕಾರ ವರ್ಸ್ಟ್ ಸರ್… ತೇಜಸ್ವಿ ಸೂರ್ಯ ಹೆಲ್ಪ್ ಲೈನ್ ನಂಬರ್ ಹಾಕಿದ್ದಾರಲ್ಲ ನೀವೇ ನೋಡಿ ಸರ್, ಆ ನಂಬರ್ ಗೆ ಕಾಲ್ ಹೋಗ್ತಾನೆ ಇಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ