ಕರ್ತವ್ಯ ನಿರತ ಯೋಧ ಹೃದಯಾಘಾತದಿಂದ ನಿಧನ - Mahanayaka
12:33 AM Saturday 18 - October 2025

ಕರ್ತವ್ಯ ನಿರತ ಯೋಧ ಹೃದಯಾಘಾತದಿಂದ ನಿಧನ

yodha nidhana
07/11/2021

ಕಾಪು: ಜಾರ್ಖಂಡ್ ನಲ್ಲಿ  ಕರ್ತವ್ಯ ನಿರತ ಕಾಪು ಮೂಲದ ಯೋಧ ನವೀನ್ ಕುಮಾರ್ ಕರ್ಕಡ ಅವರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ನಡೆದಿದ್ದು, ಭಾನುವಾರ ಸಂಜೆ ಅವರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ತಿಳಿದು ಬಂದಿದೆ.


Provided by

ಕಾಪು ತಾಲೂಕಿನ ಕಳತ್ತೂರು ಚಂದ್ರನಗರ ಕನ್ನಡರಬೆಟ್ಟು ನಿವಾಸಿ 50 ವರ್ಷ ವಯಸ್ಸಿನ ಯೋಧ ನವೀನ್ ಕುಮಾರ್ ಅವರು, ಕಳೆದ 29 ವರ್ಷಗಳಿಂದ ಸಿಐಎಸ್ ಎಫ್ ಯೋಧರಾಗಿ ಸೇನೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು. ಮುಂದಿನ ವರ್ಷ ಅವರು ನಿವೃತ್ತಿ ಹೊಂದಲಿದ್ದರು. ಆದರೆ ಅದಕ್ಕೂ ಮುನ್ನ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಯೋಧ ನವೀನ್ ಕುಮಾರ್ ಅವರ ಪಾರ್ಥೀವ ಶರೀರವನ್ನು  ಜಾರ್ಖಾಂಡ್ ಸೇನಾ ನೆಲೆಯಿಂದ ಕೋಲ್ಕತ್ತಾ, ಮುಂಬೈ ಮಾರ್ಗದ ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದ್ದು, ಭಾನುವಾರ ಪಾದೂರು ಚರ್ಚ್ ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ