ಕಾವಲುಗಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿ 15 ಕೆ.ಜಿ. ಬೆಳ್ಳಿ, 4 ಲಕ್ಷ ರೂ. ಕಳವು - Mahanayaka
10:22 AM Tuesday 20 - January 2026

ಕಾವಲುಗಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿ 15 ಕೆ.ಜಿ. ಬೆಳ್ಳಿ, 4 ಲಕ್ಷ ರೂ. ಕಳವು

manjeshwara
26/07/2021

ಮಂಜೇಶ್ವರ: ಆಭರಣ ಮಳಿಗೆಯ ಕಾವಲುಗಾರನನ್ನು ಕಟ್ಟಿ ಹಾಕಿದ ದರೋಡೆಕೋರರು 15 ಕೆ.ಜಿ ಬೆಳ್ಳಿ ಹಾಗೂ ನಾಲ್ಕು ಲಕ್ಷ ರೂಪಾಯಿಯನ್ನು ಕಳವು ಮಾಡಿದ ಘಟನೆ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆದಿದೆ.

ಸೋಮವಾರ ಮುಂಜಾನೆ ಈ ಘಟನೆ ನಡೆದಿದ್ದು, ಆಭರಣ ಮಳಿಗೆಯ ಕಾವಲುಗಾರನನ್ನು ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬೆಳ್ಳಿಯ ಆಭರಣಗಳು ಹಾಗೂ 4 ಲಕ್ಷ ರೂಪಾಯಿ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಅಬ್ದುಲ್ಲಾ ಎಂಬವರು ಹಲ್ಲೆಗೊಳಗಾದ ಕಾವಲುಗಾರನಾಗಿದ್ದು, ದರೋಡೆಕೋರರ ಹಲ್ಲೆಯಿಂದಾಗಿ ಅವರಿಗೆ ಗಂಭೀರವಾಗಿ ಗಾಯವಾಗಿದ್ದು,  ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಸುಮಾರು ಮೂರು ಗಂಟೆಯ ವೇಳೆಗೆ ದರೋಡೆಕೋರರು ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.

ಇನ್ನೂ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇನ್ನೂ ಗಾಯಗೊಂಡಿರುವ ಕಾವಲುಗಾರನ ಆರೋಗ್ಯ ಚೇತರಿಕೆಯಾದರೆ ಇನ್ನಷ್ಟು ವಿಚಾರಗಳು ತಿಳಿದು ಬರುವ ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿ