ಕೈಲಾಸ ದೇಶಕ್ಕೆ ಭಾರತೀಯರಿಗೆ ನೋ ಎಂಟ್ರಿ ಎಂದ ಸ್ವಾಮಿ ನಿತ್ಯಾನಂದ - Mahanayaka

ಕೈಲಾಸ ದೇಶಕ್ಕೆ ಭಾರತೀಯರಿಗೆ ನೋ ಎಂಟ್ರಿ ಎಂದ ಸ್ವಾಮಿ ನಿತ್ಯಾನಂದ

swamy nithyananda
21/04/2021


Provided by

ಈಕ್ವೆಡಾರ್: ಭಾರತದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದ್ದು, ದೇವಮಾನವ ಸ್ವಾಮಿ ನಿತ್ಯಾನಂದ ತಮ್ಮ ಕೈಲಾಸ ದೇಶಕ್ಕೆ ಭಾರತೀಯರಿಗೆ ನೋ ಎಂಟ್ರಿ ಎಂದು ಹೇಳಿದ್ದಾರೆ. ಭಾರತ ಮಾತ್ರವಲ್ಲದೇ  ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಮಲೇಷ್ಯಾದ ಪ್ರಯಾಣಿಕರನ್ನು ನಿಷೇಧಿಸಿರುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪಿ ನಿತ್ಯಾನಂದ ತಾನು ಈಕ್ವೆಡಾರ್ ಕರಾವಳಿಯಲ್ಲಿರುವ ‘ಕೈಲಾಸಾ’ ಎಂಬ ತಮ್ಮ ‘ವರ್ಚುವಲ್ ದ್ವೀಪ’ದಲ್ಲಿ ನೆಲೆಸಿರುವುದಾಗಿ ಹೇಳಿದ್ದಾನೆ. ಇದಲ್ಲದೇ ಇದು ಕೈಲಾಸವಾಗಿದ್ದು, ಪ್ರತ್ಯೇಕ ದೇಶ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾನೆ.

ಕೈಲಾಸದಲ್ಲಿ ಕೂಡ ರಿಸರ್ವ್ ಬ್ಯಾಂಕ್ ತೆರೆದಿದ್ದು, ಹೊಸ ಕರೆನ್ಸಿ ಅನಾವರಣಗೊಂಡಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದ. ಪ್ರಭಾವಿಗಳ ನಂಟಿರುವ ನಿತ್ಯಾನಂದ ಭಾರತದೊಳಗೆ ಅಡಗಿ ಈ ರೀತಿಯ ಆಟಗಳನ್ನು ಆಡುತ್ತಿದ್ದಾನೆ ಎನ್ನುವ ಅನುಮಾನಗಳು ಕೂಡ ಇದೆ. ಈ ನಡುವೆ ತನ್ನ ಕೈಲಾಸಕ್ಕೆ ಭಾರತೀಯರು ಸೇರಿದಂತೆ ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಮಲೇಷ್ಯಾದ ಪ್ರಯಾಣಿಕರನ್ನು ನಿಷೇಧಿಸಿರುವುದಾಗಿ ಹೇಳಿದ್ದಾನೆ.

ಇತ್ತೀಚಿನ ಸುದ್ದಿ