ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ ಕೊಂಡೊಯ್ದರು: ಅಬೂಬಕರ್ ಕುಳಾಯಿ - Mahanayaka
4:41 AM Thursday 18 - December 2025

ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ ಕೊಂಡೊಯ್ದರು: ಅಬೂಬಕರ್ ಕುಳಾಯಿ

abubakar kulai
22/09/2022

ಮಂಗಳೂರು: ಮಂಗಳೂರಿನಲ್ಲಿ NIA ದಾಳಿ ಅಂತ್ಯಗೊಂಡಿದ್ದು, ಹಲವು ದಾಖಲೆಗಳೊಂದಿಗೆ ಅಧಿಕಾರಿಗಳು ತೆರಳಿದ್ದಾರೆ. ಮುಂಜಾನೆ 3:30ರ ವೇಳೆ ಎನ್ ಐಎ ದಾಳಿ ನಡೆದಿದ್ದು, ಮಂಗಳೂರಿನ ಸ್ಟೇಟ್ ಬ್ಯಾಂಕ್  ನ ನೆಲ್ಲಿಕಾಯಿ ರಸ್ತೆ ಬಳಿ ಇರುವ ಎಸ್ ಡಿಪಿಐ, ಪಿಎಫ್ ಐ ಕಛೇರಿಗೆ ದಾಳಿ ನಡೆದಿದೆ.

ದಾಳಿ ಬಗ್ಗೆ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಪ್ರತಿಕ್ರಿಯೆ ನೀಡಿ,  ಎನ್ ಐ ಎ ಅಧಿಕಾರಿಗಳು ಮುಂಜಾನೆ 3:30ರ ವೇಳೆಗೆ ಕಛೇರಿಗೆ ಬಂದಿದ್ದಾರೆ. ನನಗೆ 5 ಗಂಟೆಯ ವೇಳೆಗೆ ಮಾಹಿತಿ ಲಭ್ಯವಾಗಿದೆ. ಎನ್ ಐ ಎ ಅಧಿಕಾರಿಗಳು ಪಿಎಫ್ ಐ ಕಛೇರಿಗೆ ದಾಳಿ ಮಾಡುವ ಸಲುವಾಗಿ ಬಂದಿದ್ದರು. ಆದರೆ ನಮ್ಮ ಕಛೇರಿಯೂ ಹತ್ತಿರದಲ್ಲಿ ಇದ್ದ ಕಾರಣ ನಮ್ಮ ಕಛೇರಿ ಮೇಲೂ ದಾಳಿ ಮಾಡಿದ್ದಾರೆ ಎಂದರು.

ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ, ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ ಪಡೆದುಕೊಂಡು ಹೋಗಿದ್ದಾರೆ. ಕಛೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಪಕ್ಷದ ಸಂಬಂಧಿಸಿದ ಕೆಲವು ಫೋಟೋ ಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಯಾವುದೇ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ ಎಂದು ಕುಳಾಯಿ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ