ಪಡುಬಿದ್ರಿ: ದಲಿತ ಸಂಘರ್ಷ ಸಮಿತಿ | ನೂತನ ಸಂಚಾಲಕರಾಗಿ ಯುವ ದಲಿತಪರ ಹೋರಾಟಗಾರ ಕೀರ್ತಿಕುಮಾರ್ ಆಯ್ಕೆ - Mahanayaka
4:12 AM Wednesday 15 - October 2025

ಪಡುಬಿದ್ರಿ: ದಲಿತ ಸಂಘರ್ಷ ಸಮಿತಿ | ನೂತನ ಸಂಚಾಲಕರಾಗಿ ಯುವ ದಲಿತಪರ ಹೋರಾಟಗಾರ ಕೀರ್ತಿಕುಮಾರ್ ಆಯ್ಕೆ

dss padubidri
01/10/2023

ಪಡುಬಿದ್ರಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ ಇಂದು ನಡೆಯಿತು.


Provided by

ಸಮಿತಿಯ ನೂತನ ಸಂಚಾಲಕರಾಗಿ ಕೀರ್ತಿಕುಮಾರ್, ಸಂಘಟನಾ ಸಂಚಾಲಕರಾಗಿ ಸುರೇಶ್ ಎರ್ಮಾಳ್, ವಿಠಲ ನಂದಿಕೂರು ಆಯ್ಕೆಯಾದರು. ಹಾಗೂ ಸಮಿತಿಯ ಇತರ ಸಂಘಟನಾ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರುಡ್ ಸೆಟ್ ಸಂಸ್ಥೆಯ ಸಂತೋಷ್ ಶೆಟ್ಟಿ ಇವರು ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಹೋರಾಟಗಾರ ಜಿಲ್ಲಾ ಸಂಚಾಲಕರಾದ ಸುಂದರ್ ಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಮೇಶ್ವರ್ ಉಪ್ಪೂರ್, ಕಾಪು ತಾಲೂಕು ಸಂಚಾಲಕರಾದ ವಿಠಲ್ ಉಚ್ಚಿಲ, ಪಡುಬಿದ್ರಿ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಹೇಮಚಂದ್ರ, ಪಡುಬಿದ್ರಿ ಪೊಲೀಸ್ ಠಾಣಾ ಸಿಬ್ಬಂದಿ ಸುದರ್ಶನ್,  ರಾಜ್ಯ ಮಹಿಳಾ ಸಂಚಾಲಾಕಿ ವಸಂತಿ ಶಿವಾನಂದ್, ಶಿವಾನಂದ್ ಕಲ್ಲಟ್ಟೆ, ಸುರೇಶ್, ಸುಕೇಶ್, ರಮೇಶ್ ನಂಬಿಯಾರ್, ವಿಠ್ಠಲ್ ಮಾಸ್ಟರ್, ಹರಿಶ್ಚಂದ್ರ, ನಯನ, ಕುಶಾಲಕ್ಷ, ಉಷಾ, ಆಶಾ, ರಮೇಶ್ ಕಲ್ಲಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ