ಕೆಲವೇ ದಿನಗಳ ಅಂತರದಲ್ಲಿ ತಂದೆ- ಮಗನ ಹತ್ಯೆ | ಹತ್ಯೆಗೆ ಕಾರಣ ಏನು ಗೊತ್ತಾ? - Mahanayaka
2:21 AM Wednesday 15 - October 2025

ಕೆಲವೇ ದಿನಗಳ ಅಂತರದಲ್ಲಿ ತಂದೆ- ಮಗನ ಹತ್ಯೆ | ಹತ್ಯೆಗೆ ಕಾರಣ ಏನು ಗೊತ್ತಾ?

09/01/2021

ಮೈಸೂರು:  ಅಪ್ಪ- ಮಗನನ್ನು ಕೆಲವೇ ದಿನಗಳ ಅಂತರಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.  ಮಂಡಕಳ್ಳಿ ಗ್ರಾಮದ  25 ವರ್ಷದ ಪುತ್ರ ಸತೀಶ್ ಕುಮಾರ್ ಹಾಗೂ 48 ವರ್ಷದ ಮರಿಕೋಟೆ ಗೌಡ ಎಂಬವರನ್ನು ಕೆಲವೇ ದಿನಗಳ ಅಂತರದಲ್ಲಿ ಹತ್ಯೆ ಮಾಡಿರುವ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


Provided by

 ಇದೇ ಗ್ರಾಮದ ನಿವಾಸಿಗಳಾದ ಮಂಜುನಾಥ್ (22), ಮಹದೇವಸ್ವಾಮಿ (22) ಹಾಗೂ ಸತೀಶ್ (22) ಬಂಧಿತರು.  ಹತ್ಯೆಗೀಡಾಗಿರುವ ಸತೀಶ್‌ಕುಮಾರ್‌ ಹಾಗೂ ಆರೋಪಿಗಳಿಗೆ ಮೊದಲಿನಿಂದಲೂ ಹಳೆ ವೈಷಮ್ಯ ಇತ್ತು. ಈ ಕಾರಣದಿಂದಾಗಿ ಸತೀಶ್‌ಕುಮಾರ್‌ ಅವರನ್ನು ಡಿ.26ರಂದು ಎಪಿಎಂಸಿ ಸಮೀಪ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಹಿಂದಿನಿಂದ ಆರೋಪಿಗಳು ಮಾರಕಾಸ್ತ್ರಗಳಿಂದು ಹೊಡೆದು  ಹತ್ಯೆ ಮಾಡಿದ್ದಾರೆ.  ಬಳಿಕ ಮೃತದೇಹವನ್ನು ಪೊದೆಯೊಂದರೊಳಗೆ ಎಸೆದು ಹೋಗಿದ್ದರು. ಘಟನೆ ನಡೆದು 2 ದಿನಗಳ ಬಳಿಕ ಮರಿಕೋಟೆ ಗೌಡ ಅವರು ಪುತ್ರ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಮರಿಕೋಟೆಗೌಡ ಈ ಪ್ರಕರಣಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಆರೋಪಿಗಳಿಗೆ ನಡುಕ ಶುರುವಾಗಿದೆ.  ಪೊಲೀಸ್ ತನಿಖೆಯಲ್ಲಿ ತನ್ನ ಪುತ್ರನನ್ನುಕೊಂದದ್ದು ಯಾರು  ಎಂದು ತಿಳಿದರೆ, ಆತ ನಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ತಿಳಿಯುತ್ತಿದ್ದಂತೆಯೇ, ಮರಿಕೋಟೆಗೌಡರ ಹತ್ಯೆಗೂ ಸಂಚು ರೂಪಿಸಿದ್ದು, ಮಂಡಕಳ್ಳಿ-ಶ್ರೀನಗರ ಮಧ್ಯೆ ರಸ್ತೆಯಲ್ಲಿ ಒಬ್ಬಂಟಿಯಾಗಿ ಬರುತ್ತಿದ್ದ ವೇಳೇ ಮರಿಕೋಟೆಗೌಡರನ್ನೂ ಹತ್ಯೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ