ಕೇರಳ ಮೂಲದ ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್: ಯುವತಿ ಸಹಿತ 8 ಮಂದಿ ಅರೆಸ್ಟ್

ಮಂಗಳೂರು: ಕೇರಳ ಮೂಲದ ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ 8 ಮಂದಿಯನ್ನು ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಮೂಡುಬಿದ್ರೆ ಮೂಲದ ಯುವತಿ, ಬೊಂದೇಲ್ ನ ಪ್ರೀತಮ್, ಕಿಶೋರ್, ಮುರಳಿ, ಸುಶಾಂತ್, ಅಭಿ ಎಂಬವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಕೇರಳ ಮೂಲದ ಉದ್ಯಮಿಯಾಗಿರುವ ಮೊಯ್ದಿನ್ ಕುಂಞಿ ಎಂಬವರಿಗೆ ಮೂಡುಬಿದ್ರೆ ಮೂಲದ ಯುವತಿಯೊಬ್ಬಳು ಪರಿಚಯವಾಗಿದ್ದು, ಆಕೆಯ ಜೊತೆಗೆ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಗೆ ಅವರು ತೆರಳಿದ್ದರೆನ್ನಲಾಗಿದೆ. ರಾತ್ರಿ ವೇಳೆ ತಂಡವು ರೆಸಾರ್ಟ್ ಗೆ ಪ್ರವೇಶಿಸಿ ಅಲ್ಲಿನ ದೃಶ್ಯ ಸೆರೆ ಹಿಡಿದು ಹಣ ನೀಡುವಂತೆ ಬೆದರಿಸಿದ್ದಾರೆ.
ಈ ವೇಳೆ ಉದ್ಯಮಿಯು ತನ್ನಲ್ಲಿದ್ದಷ್ಟು ಹಣ ನೀಡಿ ಸ್ಥಳದಿಂದ ಪಾರಾಗಿದ್ದರು. ಆದ್ರೆ ಇದರ ನಂತರವೂ ತಂಡ ಮತ್ತೆ ಮತ್ತೆ ಹಣ ನೀಡುವಂತೆ ಕರೆ ಮಾಡಿ ಪೀಡಿಸಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಹಣವನ್ನು ಉದ್ಯಮಿಯಿಂದ ಪೀಕಿಸಿದ್ದಾರೆನ್ನಲಾಗಿದೆ.
ಆರೋಪಿಗಳ ಬ್ಲ್ಯಾಕ್ ಮೇಲ್ ನಿಂದ ಬೇಸತ್ತ ಉದ್ಯಮಿ ಕಾವೂರು ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಕಾವೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw