ಸಣ್ಣ ವಯಸ್ಸಲ್ಲೇ ಪ್ರೀತಿಸಿದರು, ಮದುವೆಯೂ ಆಯ್ತು, ಆದರೆ ಪ್ರಕೃತಿ ಆಟಕ್ಕೆ ದುರಂತವೇ ನಡೆದು ಹೋಯ್ತು! - Mahanayaka

ಸಣ್ಣ ವಯಸ್ಸಲ್ಲೇ ಪ್ರೀತಿಸಿದರು, ಮದುವೆಯೂ ಆಯ್ತು, ಆದರೆ ಪ್ರಕೃತಿ ಆಟಕ್ಕೆ ದುರಂತವೇ ನಡೆದು ಹೋಯ್ತು!

reji kannika
05/04/2022


Provided by

ಸುದೀರ್ಘವಾದ ಪ್ರೇಮದ ನಂತರ ಮದುವೆಯಾದ ಜೋಡಿ ಪ್ರಕೃತಿ ಆಟಕ್ಕೆ ಬಲಿಯಾದ ಘಟನೆ ಕೇರಳದಲ್ಲಿ ನಡೆದಿದ್ದು, ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ಜೋಡಿಯ ಜೀವನದಲ್ಲಿ ದುರಂತವೇ ನಡೆದು ಹೋಗಿದೆ.

ಹೌದು..! ರೆಜಿ ಮತ್ತು ಕನಿಕಾ(Reji- Kannika) ಎಂಬ ಜೋಡಿಯ ಜೀವನದಲ್ಲಿ ಇಂತಹದ್ದೊಂದು ದುರ್ಘಟನೆ ನಡೆದಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರೆಜಿ ಹಾಗೂ ನೃತ್ಯ ಶಿಕ್ಷಕಿ ಕನಿಕಾ ಸಣ್ಣ ವಯಸ್ಸಿನಲ್ಲೇ ಪರಸ್ಪರ ಪ್ರೀತಿಸುತ್ತಿದ್ದರು.

ಇವರ ಸುದೀರ್ಘ ಪ್ರೇಮದ ಬಳಿಕ ಮಾರ್ಚ್ 15ರಂದು ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭಾನುವಾರ ಮೀನತುಳ್ಳಿಪಾರದಲ್ಲಿ ಫೋಟೊ ಶೂಟ್ ಮುಗಿಸಿ ಹಿಂತಿರುಗಿದ ಜೋಡಿ ಮತ್ತೊಮ್ಮೆ ಪ್ರಕೃತಿಯ ಸೌಂದರ್ಯ ಸವಿಯಲು ಮತ್ತೊಮ್ಮೆ ಮೀನತುಳ್ಳಿಪಾರ ಜಾನಕಿ ಕಾಡಿಗೆ ತೆರಳಿದ್ದು, ಈ ವೇಳೆ ಕನಿಕಾ ಮೊಬೈಲ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನದಿಗೆ  ಜಾರಿ ಬಿದ್ದಿದ್ದಾಳೆ. ಆಕೆಯನ್ನು ಹಿಡಿದುಕೊಳ್ಳಲು ರೆಜಿ ಹೋಗಿದ್ದು, ಈ ವೇಳೆ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ಸಾಮಗ್ರಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕ ಘಟನೆಯನ್ನು ಗಮನಿಸಿ ಸ್ಥಳಕ್ಕೆ ಬಂದಿದ್ದು, ತಕ್ಷಣವೇ ಕನಿಕಾಳನ್ನು ರಕ್ಷಿಸಿದ್ದಾನೆ. ರೆಜಿಯನ್ನು 20 ನಿಮಿಷಗಳ ಕಾಲ ಹುಡುಕಿದ ಬಳಿಕ ಪತ್ತೆ ಹಚ್ಚಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ.

ಪಂದಿಕರ ಖಾಸಗಿ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಯಿತಾದರೂ ರೆಜಿಯ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಸೋಮವಾರ ನಡೆದ ಈ ಘಟನೆ ಎಲ್ಲರನ್ನೂ ಮೌನವಾಗಿಸಿದೆ. ಈ ಭಾಗದಲ್ಲಿ ಸಾಕಷ್ಟು ಬಾರಿ ಇಂತಹ ದುರಂತಗಳು ನಡೆದಿವೆ ಎಂದು ಹೇಳುತ್ತಿದ್ದಾರೆ. ಆದರೂ ಪ್ರಕೃತಿಯ ಸೌಂದರ್ಯದ ಮಡಿಲಿನಲ್ಲಿ ಅವಿತಿರುವ ಅಪಾಯವನ್ನು ಅರಿಯದೇ ಯುವ ಜೋಡಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕೇರಳದಲ್ಲಿ ಸದ್ಯ ಪ್ರತಿ ಮನೆಯಲ್ಲೂ ಈ ಜೋಡಿಯ ದುರಂತ ಕಥೆಯೇ ಕೇಳುತ್ತಿದೆ. ರೆಜಿ ಇಲ್ಲದ ಕನ್ನಿಕಾಳ ಮುಂದಿನ ಜೀವನ ಹೇಗೆ? ಎನ್ನುವ ಮಾತುಗಳೇ ಇದೀಗ ಪ್ರಮುಖ ವಿಚಾರವಾಗಿದೆ. ಪ್ರಕೃತಿಯ ಆಟ ಬಲ್ಲವರು ಯಾರು? ಎನ್ನುವ ಪ್ರಶ್ನೆಗಳಷ್ಟೇ ಈಗ ಕೇಳಲು ಉಳಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಹುಲ್​ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78ರ ವೃದ್ಧೆ!

ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ: ಐವರಿಗೆ ಗಾಯ, ಮಹಿಳೆಯ ಸ್ಥಿತಿ ಗಂಭೀರ

ಎಚ್ಚರ: ನಿದ್ದೆ ಕೆಟ್ಟರೆ ನೀವು ಈ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾದೀತು!

ಗಾಂಜಾ ವ್ಯಸನಿ 15 ವರ್ಷ ಮಗನ ಚಟ ಬಿಡಿಸಲು ಮುಖಕ್ಕೆ ಖಾರದ ಪುಡಿ ಎರಚಿದ ತಾಯಿ!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಶಾಕ್ ನೀಡಿದ ವಿದ್ಯುತ್ ಬೆಲೆ ಏರಿಕೆ!

ಇತ್ತೀಚಿನ ಸುದ್ದಿ