ಕೇರಳದಲ್ಲಿ ಪತ್ತೆಯಾದ ಜೀರುಂಡೆ ಜ್ವರ:  ವಿದ್ಯಾರ್ಥಿ ಸಾವು - Mahanayaka

ಕೇರಳದಲ್ಲಿ ಪತ್ತೆಯಾದ ಜೀರುಂಡೆ ಜ್ವರ:  ವಿದ್ಯಾರ್ಥಿ ಸಾವು

kerala
09/06/2022

ತಿರುವನಂತಪುರಂ: ತಿರುವನಂತಪುರದಲ್ಲಿ ಜೀರುಂಡೆ  ಜ್ವರದಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.  ಮೃತರನ್ನು ವರ್ಕಳ ಮೂಲದ ಅಶ್ವತಿ (15) ಎಂದು ಗುರುತಿಸಲಾಗಿದೆ.

ವಾರದ ಹಿಂದೆ ಜ್ವರ, ವಾಂತಿ ಕಾಣಿಸಿಕೊಂಡು ಅಶ್ವತಿ ಅವರನ್ನು ವರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆಸ್ಪತ್ರೆಯ ಅಧಿಕಾರಿಗಳು ಔಷಧ ನೀಡಿ ಮನೆಗೆ ಕಳುಹಿಸಿದ್ದು, ಮರುದಿನ ಅಶ್ವತಿ ಮನೆಯಲ್ಲೇ ಕುಸಿದು ಬಿದ್ದಿದ್ದರು.

ಕೂಡಲೇ ಅವರನ್ನು ಪಾರಿಪಲ್ಲಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು.  ಈ ವಾರದಲ್ಲಿ, ಅಶ್ವತಿ ಅವರ ಆಮ್ಲಜನಕದ ಮಟ್ಟ ಕಡಿಮೆಯಾಯಿತು ಮತ್ತು ಅವರನ್ನು   ವೆಂಟಿಲೇಟರ್‌ ಗೆ ವರ್ಗಾಯಿಸಲಾಗಿತ್ತು ಆದರೆ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಅಶ್ವತಿ ಅವರು ಮೆಕ್ಕಾಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಖ್ಯಾತ ನಟಿ ನಯನತಾರಾ, ವಿಘ್ನೇಶ್ ಶಿವ ಅದ್ದೂರಿ ವಿವಾಹ

ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ: ಮೆಕ್ ಡೊನಾಲ್ಡ್ಸ್ ಗೆ ವಿಧಿಸಿದ ದಂಡ ಎಷ್ಟು ಗೊತ್ತಾ?

ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಿಥಾಲಿ ರಾಜ್

ಇತ್ತೀಚಿನ ಸುದ್ದಿ