ರಾಹುಲ್ ಗಾಂಧಿ ಅವಿವಾಹಿತ, ಹೆಣ್ಣು ಮಕ್ಕಳು ಎಚ್ಚರದಿಂದಿರಿ | ಕೇರಳದಲ್ಲಿ ವಿವಾದ ಎಬ್ಬಿಸಿದ ಹೇಳಿಕೆ - Mahanayaka
4:38 AM Thursday 16 - October 2025

ರಾಹುಲ್ ಗಾಂಧಿ ಅವಿವಾಹಿತ, ಹೆಣ್ಣು ಮಕ್ಕಳು ಎಚ್ಚರದಿಂದಿರಿ | ಕೇರಳದಲ್ಲಿ ವಿವಾದ ಎಬ್ಬಿಸಿದ ಹೇಳಿಕೆ

rahul gandhi conference student
30/03/2021

ಇಡುಕ್ಕಿ: ರಾಹುಲ್‌ ಗಾಂಧಿ ಅವರು ಮಹಿಳಾ ಕಾಲೇಜುಗಳಿಗೆ ಮಾತ್ರ ಭೇಟಿ ನೀಡುತ್ತಾರೆ. ಹಾಗಾಗಿ ಮಾಜಿ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ವ್ಯವಹರಿಸುವಾಗ ವಿದ್ಯಾರ್ಥಿನಿಯರು ‘ಜಾಗರೂಕರಾಗಿರಬೇಕು‌’ ಎಂದು ಇಡುಕ್ಕಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಿಪಿಐ ಬೆಂಬಲದೊಂದಿಗೆ ಜಯಗಳಿಸಿದ್ದ ಜಾರ್ಜ್‌ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.


Provided by

ರಾಹುಲ್‌ ಗಾಂಧಿ ಅವಿವಾಹಿತ ಕಷ್ಟ ತಂದೊಡ್ಡುವವವರಾಗಿದ್ದು, ಹೆಣ್ಣು ಮಕ್ಕಳು ಅವರ ಮುಂದೆ ಎಂದಿಗೂ ಬಾಗಬಾರದು ಎಂದು ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿದ್ದಾರೆ.  ಇನ್ನೂ, ಜಾರ್ಜ್‌ ಅವರ ಈ ಹೇಳಿಕೆಗಳಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಂತರ ಕಾಯ್ದುಕೊಂಡಿದ್ದು,  ರಾಹುಲ್‌ ಗಾಂಧಿ ವಿರುದ್ಧ ವೈಯಕ್ತಿವಾಗಿ ದಾಳಿ ಮಾಡುವುದು ಎಲ್‌ಡಿಎಫ್‌ ನ ನಿಲುವಲ್ಲ ಎಂದು ಹೇಳಿದ್ದಾರೆ.

ಜಾರ್ಜ್‌ ಅವರು, ರಾಹುಲ್‌ ಗಾಂಧಿಯನ್ನು ಮಾತ್ರವಲ್ಲದೆ ವಿದ್ಯಾರ್ಥಿನಿಯರನ್ನೂ ಅವಮಾನಿಸಿದ್ದಾರೆ. ಈ ಸಂಬಂಧ ಅವರ ವಿರುದ್ಧ ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಕಾಂಗ್ರೆಸ್‌ ಮುಖಂಡ ಡೀನ್‌ ಕುರಿಯಾಕೋಸ್‌  ಕೂಡ  ಹೇಳಿದ್ದಾರೆ.

8 ತಿಂಗಳ ಗರ್ಭಿಣಿಗೆ  3 ಕಿ.ಮೀ. ನಡೆಸುವ ಶಿಕ್ಷೆ ನೀಡಿದ ಮಹಿಳಾ ಪೊಲೀಸ್

ಇತ್ತೀಚಿನ ಸುದ್ದಿ