ಮಕ್ಕಳನ್ನು ರಕ್ಷಿಸಲು ಹೋದ ಅಮ್ಮ- ಚಿಕ್ಕಮ್ಮ ಸೇರಿದಂತೆ ನಾಲ್ವರು ಜಲಸಮಾಧಿ - Mahanayaka

ಮಕ್ಕಳನ್ನು ರಕ್ಷಿಸಲು ಹೋದ ಅಮ್ಮ- ಚಿಕ್ಕಮ್ಮ ಸೇರಿದಂತೆ ನಾಲ್ವರು ಜಲಸಮಾಧಿ

04/02/2021


Provided by

ಕೋಲಾರ: ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.  ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಈ ಭೀಕರ ಘಟನೆ ನಡೆದಿದೆ.

ರುಕ್ಮಿಣಿ ಬಾಯ್(35) ಹಾಗೂ ಇವರ ಪುತ್ರಿಯರಾದ ಆರತಿ(6), ಕೀರ್ತಿ(5) ಹಾಗೂ ರುಕ್ಮಿಣಿ ಅವರ ತಂಗಿ ರಾಜೇಶ್ವರಿ(30) ಮೃತಪಟ್ಟವರಾಗಿದ್ದಾರೆ. ಕೆರೆಯ ಬಳಿ ಬಟ್ಟೆ ತೊಳೆಯುತ್ತಿದ್ದ ವೇಳೆ ನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿಗೆ ಇಳಿದಿದ್ದು, ಮುಳುಗಿ ಹೋಗಿದ್ದಾರೆ.

ಮಕ್ಕಳನ್ನು ರಕ್ಷಿಸಲು ತಮ್ಮ ಜೀವದ ಹಂಗು ತೊರೆದು ತಾಯಿ ಹಾಗೂ ಚಿಕ್ಕಮ್ಮ ನೀರಿಗೆ ಹಾರಿದ್ದು, ಆದರೆ, ಮೇಲೆ ಬರಲು ಸಾಧ್ಯವಾಗದೇ ಅವರು ನೀರಿನಲ್ಲಿ ಮುಳುಗಿ ಸಾ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಕುಪ್ಪಂ ಠಾಣೆ ಪೊಲೀಸರು ಧಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ