ತಂದೆ, ಮಲತಾಯಿ ಸೇರಿ 17 ವರ್ಷದ ಮಗಳ ಬರ್ಬರ ಹತ್ಯೆ: ಬೆಚ್ಚಿ ಬಿದ್ದ ಗ್ರಾಮಸ್ಥರು - Mahanayaka
6:39 PM Saturday 15 - November 2025

ತಂದೆ, ಮಲತಾಯಿ ಸೇರಿ 17 ವರ್ಷದ ಮಗಳ ಬರ್ಬರ ಹತ್ಯೆ: ಬೆಚ್ಚಿ ಬಿದ್ದ ಗ್ರಾಮಸ್ಥರು

sonalli
11/01/2023

ಪುರಿ:  ತಂದೆ ಮತ್ತು  ಮಲತಾಯಿ ಜೊತೆ ಸೇರಿಕೊಂಡು 17 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ನಡೆಸಿ ಸುಟ್ಟು ಹಾಕಿದ ಘಟನೆ ಒಡಿಶಾದ ಪುರಿ ಜಿಲ್ಲೆಯ ಗೋಪ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಸೊನಾಲಿ ಮೊಹರಾಣ ಎಂಬಾತಕೆ ತನ್ನ ಹೆತ್ತವರಿಂದಲೇ ಹತ್ಯೆಗೀಡಾದ ಯುವತಿಯಾಗಿದ್ದಾಳೆ. ಈಕೆಯ ಹಿರಿಯ ಸಹೋದರಿ ಮೊಹರಾಣ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗೋಪ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ತಂದೆ ದುರ್ಗಾಚರಣ ಮೊಹರಾಣನನ್ನು ಬಂಧಿಸಿದ್ದಾರೆ.

2018ರಲ್ಲಿ ದುರ್ಗಾಚರಣ್ ನ ಮೊದಲ ಪತ್ನಿ ಮೃತಪಟ್ಟಿದ್ದಳು. 2022ರಲ್ಲಿ ಮಮತಾ ಓಜಾ ಎಂಬಾಕೆಯನ್ನು ದುರ್ಗಾಚರಣ್ ವಿವಾಹವಾಗಿದ್ದಾನೆ. ಇದಾದ ಬಳಿಕ ಮಲತಾಯಿ ಹಾಗೂ ಆಕೆಯ ಸಹೋದರ ಜೀವನ್ ಓಜಾ ಸೇರಿಕೊಂಡು ಸೋನಾಲಿಗೆ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮಲತಾಯಿ ಹಾಗೂ ಆಕೆಯ ಸಹೋದರ ನಿರಂತರ ಕಿರುಕುಳಕ್ಕೆ ತಂದೆ ದುರ್ಗಾಚರಣ್ ಬೆಂಬಲ ನೀಡುತ್ತಿದ್ದ. ಇತ್ತ ತಂಗಿ ಸಾವನ್ನಪ್ಪಿದ ವಿಚಾರ ತಿಳಿದು ಆಗಮಿಸಿದ ಅಕ್ಕ ರಂಜಿತಾ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ