ಚಿಕಿತ್ಸೆಗೆ ಪರದಾಡುತ್ತಿದ್ದ ಕಿರುತೆರೆ ನಟಿಯ ತಾಯಿಗೆ ನೆರವಾದ ಕಿಚ್ಚ ಸುದೀಪ್ - Mahanayaka

ಚಿಕಿತ್ಸೆಗೆ ಪರದಾಡುತ್ತಿದ್ದ ಕಿರುತೆರೆ ನಟಿಯ ತಾಯಿಗೆ ನೆರವಾದ ಕಿಚ್ಚ ಸುದೀಪ್

kicha sudeep
09/05/2021

ಬಾಗಲಕೋಟೆ:  ತಾಯಿಯ ಚಿಕಿತ್ಸೆಗೆ ಪರದಾಡುತ್ತಿದ್ದ ಕಿರುತೆರೆ ನಟಿಗೆ ನೆರವಾಗುವ ಮೂಲಕ ನಟ ಕಿಚ್ಚ ಸುದೀಪ್ ಮಾನವೀಯತೆ ಮೆರೆದಿದ್ದಾರೆ. ಬಿಗ್ ಬಾಸ್ ಸೀಸನ್ 2ರ ಸ್ಪರ್ಧಿ, ಕಿರುತೆರೆ ನಟಿ ಸೋನು ಪಾಟೀಲ್ ಅವರ ತಾಯಿ ಮಹಾದೇವಿ  ಪಾಟೀಲ ಅವರಿಗೆ  ಅನಾರೋಗ್ಯ ಕಾಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುಬಾರಿ ಬಿಲ್ ಕಟ್ಟಲು ಅವರಿಂದ ಸಾಧ್ಯವಾಗಿರಲಿಲ್ಲ.

ಮಹಾದೇವಿ ಅವರಿಗೆ ತೀವ್ರವಾಗಿ ನ್ಯುಮೋನಿಯಾ ಬಾಧಿತರಾಗಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಅವರನ್ನು ಬಾಗಲಕೋಟೆಯ ಶಕುಂತಲಾ ಆಸ್ಪತ್ರೆಗೆ ಪುತ್ರಿ ಸೋನು ದಾಖಲಿಸಿದ್ದರು. ಆಸ್ಪತ್ರೆಯ ಬಿಲ್ 5 ಲಕ್ಷ ರೂಪಾಯಿಗಳಾಗಿತ್ತು. ಆದರೆ ಇಷ್ಟು ಹಣವನ್ನು ಭರಿಸಲು ಅವರಿಂದ ಸಾಧ್ಯವಿರಲಿಲ್ಲ. ಸ್ನೇಹಿತರ ಬಳಿ ನೆರವು ಕೇಳಿದರಾದರೂ ಅವರಲ್ಲಿಯೂ ಅಷ್ಟೊಂದು ದೊಡ್ಡ ಮೊತ್ತದ ಹಣ ಇರಲಿಲ್ಲ.

ಇದೇ ಸಂದರ್ಭದಲ್ಲಿ ಸುದೀಪ್ ಅವರನ್ನು ಸಂಪರ್ಕಿಸಿದ್ದು, ಈ ವೇಳೆ ನಟ ಸುದೀಪ್ ಅವರು ಕಿಚ್ಚ ಚಾರಿಟೇಬಲ್ ಟ್ರಸ್ಟ್  ಮೂಲಕ ತ್ವರಿತವಾಗಿ ಸೋನು ಅವರಿಗೆ ನೆರವು ನೀಡಿದ್ದಾರೆ ಎಂದು ಸೋನುಪಾಟೀಲ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ