ಡ್ರೋನ್ ಗಳನ್ನು ಬೇಟೆಯಾಡಲು ಭಾರತೀಯ ಸೇನೆಯ ‘ಗಿಡುಗ’ ಸಜ್ಜು - Mahanayaka
11:46 AM Saturday 23 - August 2025

ಡ್ರೋನ್ ಗಳನ್ನು ಬೇಟೆಯಾಡಲು ಭಾರತೀಯ ಸೇನೆಯ ‘ಗಿಡುಗ’ ಸಜ್ಜು

indian army kite
29/11/2022


Provided by

ಪಾಕಿಸ್ತಾನದಿಂದ ನಿತ್ಯವೂ ಗಡಿದಾಟಿ ಹಲವು ಡ್ರೋನ್ ಗಳು ಭಾರತಕ್ಕೆ ಬರುತ್ತಿದ್ದು, ಭಾರತೀಯ ಸೇನೆಯ ಯೋಧರು, ಡ್ರೋನ್ ಗಳನ್ನು ಹೊಡೆದುರುಳಿಸುತ್ತಿದ್ದಾರೆ. ಇದೀಗ ಡ್ರೋನ್ ಗಳ ಹಾವಳಿಗೆ ಶಾಶ್ವತ ಮುಕ್ತಿ ನೀಡಲು ಸೇನೆ ಮುಂದಾಗಿದೆ.

ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಡ್ರೋನ್ ಗಳ ವಿರುದ್ಧದ ಕಾರ್ಯಾಚರಣೆಗೆ ಗಿಡುಗಗಳನ್ನು ಬಳಸಿಕೊಳ್ಳಲಿದೆ. ಭಾರತೀಯ ಸೇನೆಯ ಸೇನಾ ಕಾರ್ಯಾಚರಣೆ ವೇಳೆ, ನಾಯಿಗಳ ಜತೆಗೆ ಗಿಡುಗಗಳನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರ ಹಾಗೂ ಪಂಜಾಬ್ ಗಡಿಯಲ್ಲಿ ಡ್ರೋನ್ ಗಳ ಹಾವಳಿ ಹೆಚ್ಚಾಗುತ್ತಿದೆ. ಡ್ರೋನ್ ಮೂಲಕ ಪಾಕಿಸ್ತಾನವು ಭಾರತದೊಳಗೆ ಡ್ರಗ್ಸ್, ಗನ್ ಮತ್ತು ಹಣವನ್ನು ರವಾನಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗ್ತಿದೆ.

ಉತ್ತರಾಖಂಡ್‌ನ ಔಲಿಯಲ್ಲಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ತರಬೇತಿ ಪ್ರದರ್ಶನ ‘ಯುದ್ಧ ಅಭ್ಯಾಸ’ದ ಸಮಯದಲ್ಲಿ ಭಾರತೀಯ ಸೇನೆಯು ಶತ್ರು ಡ್ರೋನ್ ಗಳನ್ನು ಬೇಟೆಯಾಡಲು ಗಿಡುಗಗಳ ಬಳಕೆಯನ್ನು ಪ್ರದರ್ಶಿಸಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ