ಕಿತ್ತಲೆ ಮಾರುವಾಗ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಶಾಲೆ ನಿರ್ಮಿಸಬೇಕು ಅನ್ನಿಸಿತು: ಹರೇಹಳ ಹಾಜಬ್ಬ - Mahanayaka
9:02 AM Wednesday 20 - August 2025

ಕಿತ್ತಲೆ ಮಾರುವಾಗ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಶಾಲೆ ನಿರ್ಮಿಸಬೇಕು ಅನ್ನಿಸಿತು: ಹರೇಹಳ ಹಾಜಬ್ಬ

harekala hajabba
21/11/2021


Provided by

ಬೆಂಗಳೂರು:  ಒಬ್ಬ ಸಾಮಾನ್ಯ ಮನುಷ್ಯನಿಗೆ ದೇಶದ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೀವಮಾನದಲ್ಲೇ ಇಂತಹ ಕನಸನ್ನು ನಾನು ಕಂಡಿರಲಿಲ್ಲ. ಪದ್ಮಶ್ರೀ ಪಡೆಯುವಾಗ ನನ್ನ ಕಣ್ಣು ತುಂಬಿ ಬಂತು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಗರದಲ್ಲಿ ಆಯೋಜಿಸಿದ್ದ  ಮನೆಯಂಗಳದಲ್ಲಿ ಮಾತುಕತೆಯ 217ನೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ಇಂಗ್ಲಿಷ್ ನಲ್ಲಿ ಕೆಲವರು ಪ್ರಶ್ನೆ ಕೇಳಿದಾಗ ನನಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿತು. ನಾನಂತೂ ಕಲಿತಿಲ್ಲ. ನಮ್ಮೂರಿನ ಮಕ್ಕಳಿಗಾದರೂ ಶಾಲೆ ನಿರ್ಮಿಸಬೇಕು ಎನ್ನುವ ಛಲ ಮೂಡಿತು ಎಂದು ಅವರು ಹೇಳಿದರು.

ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನಗೆ ಮೂವರು ಮಕ್ಕಳು. ಬಡತನ ಇದೆ ಎಂದು ಕೊರಗುತ್ತಾ ಕೂರಲಿಲ್ಲ. ಜೀವನದಲ್ಲಿ ಹಂತ ಹಂತವಾಗಿ ಮೇಲೆ ಬಂದಿದ್ದೇನೆ. ಬಡತನದ ಸಮಸ್ಯೆಯನ್ನು ದೇವರೇ ಪರಿಹರಿಸಿದ್ದಾನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇಂದು ಈ ಬಡವನ ಮನೆಗೆ ಬಂದು ಶ್ರೀಮಂತರು ಕೂಡ ಪ್ರೀತಿಯಿಂದ ಗೌರವಿಸುತ್ತಾರೆ. ಇದೇ ನಾನು ಸಮಾಜಕ್ಕೆ  ನೀಡಿರುವ ಕೊಡುಗೆ ಎಂದು ಭಾವಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಂಧ್ರಪ್ರದೇಶ:  ಪ್ರವಾಹದ ಪರಿಣಾಮ 25 ಮಂದಿ ಸಾವು, 17ಕ್ಕೂ ಅಧಿಕ ಮಂದಿ ನಾಪತ್ತೆ 20 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರ

ಒಂದೋ ಜೈಲಿಗಟ್ಟಿ ಇಲ್ಲವೇ, ಹುಚ್ಚಾಸ್ಪತ್ರೆಗೆ ಸೇರಿಸಿ: ಕಂಗನಾ ವಿರುದ್ಧ ಸಿಡಿದೆದ್ದ ಸಿಖ್ಖರು

ಗಾಂಜಾ ಮಾರಾಟ ಆರೋಪ: ಅಮೆಜಾನ್ ವಿರುದ್ಧ ದೂರು ದಾಖಲು

ಮಗುವಿಗೆ ಜನ್ಮ ನೀಡಿದ ಎಸೆಸೆಲ್ಸಿ ವಿದ್ಯಾರ್ಥಿನಿ | ಆರೋಪಿ ಅರೆಸ್ಟ್

ಪ್ರವಾಹಕ್ಕೆ ನಲುಗಿದ ಆಂಧ್ರಪ್ರದೇಶ: 17 ಮಂದಿ ಸಾವು, 100ಕ್ಕೂ ಅಧಿಕ ಮಂದಿ ನಾಪತ್ತೆ

ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?

 

ಇತ್ತೀಚಿನ ಸುದ್ದಿ