ಕೀವ್‌ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ: ಭಾರತೀಯ ವೈದ್ಯ ಕುಟುಂಬದ ಮನವಿ - Mahanayaka
4:46 PM Thursday 16 - October 2025

ಕೀವ್‌ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ: ಭಾರತೀಯ ವೈದ್ಯ ಕುಟುಂಬದ ಮನವಿ

dr rajakumar santhalani
03/03/2022

ನವದೆಹಲಿ​: ರಷ್ಯಾ ಆಕ್ರಮಣದಿಂದ ಉಕ್ರೇನ್ ​ನಲ್ಲಿ ಉದ್ವಿಗ್ನತೆ ಆವರಿಸಿದೆ. ಉಕ್ರೇನ್​ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಚುರುಕಾಗಿದೆ. ಹಂತ ಹಂತವಾಗಿ ಭಾರತೀಯರನ್ನು ಕರೆತರಲಾಗುತ್ತಿದ್ದು, ಇನ್ನೂ ಹಲವರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಹೀಗೆ ಉಕ್ರೇನ್​ ನಲ್ಲಿ ಸಿಲುಕಿರುವ ಕುಟುಂಬವು ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದೆ.


Provided by

ನಾಲ್ವರು ಸದಸ್ಯರನ್ನೊಳಗೊಂಡ ಕುಟುಂಬವು ಉಕ್ರೇನ್‌ನ ರಾಜಧಾನಿ ಕೀವ್​​ ನಿಂದ ತಮ್ಮನ್ನು ರಕ್ಷಿಸುವಂತೆ ಮನವಿಯನ್ನು ಕಳುಹಿಸಿದೆ. ಮಂಗಳವಾರದ ವೇಳೆಗೆ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಭಾವಿಸಲಾಗಿದೆ, ಆದರೆ ರಷ್ಯಾದ ಆಕ್ರಮಣದ ನಡುವೆ ಈ ನಗರವನ್ನು ತೊರೆಯಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಮ್ಮದು ನಾಲ್ವರ ಕುಟುಂಬ. ನಾನು ಡಾ. ರಾಜ್‌ ಕುಮಾರ್ ಸಂತಾಲಾನಿ, ನನ್ನ ಪತ್ನಿ ಮಯೂರಿ ಮೋಹನಂದನೆ, ನನ್ನ ಮಗಳು ಜ್ಞಾನ ರಾಜ್ ಸಂತಾಲಾನಿ ಮತ್ತು ನನ್ನ ಮಗ ಪಾರ್ಥ ಸಂತಾಲಾನಿ. ಉಕ್ರೇನ್​ ರಾಜಧಾನಿ ಕೀವ್‌ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ..

ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಮಗೆ ಅನೇಕ ಬಾರಿ ಕರೆ ಮಾಡಿದರು. ಆದರೆ, ಅವರು ನಮ್ಮನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವರು ವಾಹನ ಕಳುಹಿಸುವುದಾಗಿ ಹೇಳಿದರು. ಈವರೆಗೆ ನಾವು ಅವರ ಕಡೆಯಿಂದ ಯಾವುದೇ ಸಾರಿಗೆ ವ್ಯವಸ್ಥೆಯನ್ನು ಪಡೆದಿಲ್ಲ.

ಹೊರಗೆ ಗುಂಡಿನ ದಾಳಿ ನಡೆಯುತ್ತಿದೆ” ಅಲ್ಲದೇ ಇಲ್ಲಿ ನಮ್ಮ ವಸ್ತುಗಳನ್ನು ಲೂಟಿ ಮಾಡಲಾಗುತ್ತಿದೆ. ನಮ್ಮಲ್ಲಿ ಹೀಟರ್ ಇಲ್ಲ. ತುಂಬಾ ಚಳಿ ಇದೆ ಮತ್ತು ನನ್ನ ಮಗನಿಗೆ ಜ್ವರವಿದೆ. ಹಾಗಾಗಿ ಸಾಧ್ಯವಾದರೆ ನಮನ್ನು ತಕ್ಷಣ ಸ್ಥಳಾಂತರಿಸಿ. ನಮಗೆ ಸಹಾಯ ಮಾಡಿ ಎಂದು ತಮ್ಮ ಶೋಚನೀಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್: ನವೀನ್ ಬಲಿಯಾದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಸಿಲುಕಿದ್ದಾರೆ ಉಜಿರೆ ವಿದ್ಯಾರ್ಥಿನಿ!

ನವೀನ್ ಸಾವಿಗೆ ನೀಟ್ ವ್ಯವಸ್ಥೆಯೇ ಕಾರಣ: ನೀಟ್ ರದ್ದುಗೊಳಿಸಲು ಬೃಹತ್ ಅಭಿಯಾನ

ಉಕ್ರೇನ್ ಒಳಗಡೆ ನಮಗೆ ಸರ್ಕಾರ ಯಾವುದೇ ರಕ್ಷಣೆ ನೀಡಲಿಲ್ಲ | ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿದ್ಯಾರ್ಥಿಗಳಿಂದ ಬೇಸರ

ಭಾರತೀಯರನ್ನು ಕರೆತರುವ ಕಾರ್ಯಚರಣೆಗೂ ‘ಗಂಗಾ’ ಹೆಸರಿಟ್ಟು ಪ್ರಧಾನಿ ಮೋದಿ ರಾಜಕೀಯ: ಸಿದ್ದರಾಮಯ್ಯ ಆಕ್ರೋಶ

ಭಾರತೀಯರನ್ನು ಕರೆತರುವ ಕಾರ್ಯಚರಣೆಗೂ ‘ಗಂಗಾ’ ಹೆಸರಿಟ್ಟು ಪ್ರಧಾನಿ ಮೋದಿ ರಾಜಕೀಯ: ಸಿದ್ದರಾಮಯ್ಯ ಆಕ್ರೋಶ

 

ಇತ್ತೀಚಿನ ಸುದ್ದಿ