ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು | ಎ.ಮಂಜು ಪುತ್ರಗೆ ಸೋಲು - Mahanayaka

ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು | ಎ.ಮಂಜು ಪುತ್ರಗೆ ಸೋಲು

bjp
14/12/2021

ಕೊಡಗು: ವಿಧಾನ ಪರಿಷತ್  ಚುನಾವಣೆಯಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದು,  ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್ ಗೌಡ ಸೋಲನುಭವಿಸಿದ್ದಾರೆ.

ಕೊಡಗು ಕ್ಷೇತ್ರದಲ್ಲಿ ಒಟ್ಟು 1,229 ಮತಗಳಿದ್ದು, 105 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿರುವ ಎ.ಮಂಜು ಅವರ ಪುತ್ರ ಮಂಥರ್ ಗೌಡ ಹಾಸನ ಕ್ಷೇತ್ರದಿಂದ ಕೊಡಗು ಕ್ಷೇತ್ರಕ್ಕೆ ಹೋಗಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಇದು ಹಲವು ಚರ್ಚೆಗೂ ಗ್ರಾಸವಾಗಿತ್ತು.

ಈ ನಡುವೆ ಇದೀಗ ಕೊಡಗಿನಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದು,  ಬಿಜೆಪಿ ಅಭ್ಯರ್ಥಿ ಸುಜಾ ಕುಶಲಪ್ಪ ಗೆಲುವು ಸಾಧಿಸಿದ್ದಾರೆ. ಸುಜಾ ಕುಶಲಪ್ಪ ಗೆಲುವಿನಿಂದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗೋವುಗಳ ರಕ್ಷಣೆಗೆ ತಲ್ವಾರ್ ಖರೀದಿಸಿ: ಸಾಧ್ವಿ ಸರಸ್ವತಿ ಕರೆ

ನೀರು ಬಿಸಿ ಮಾಡುವ ವೇಳೆ ಹೀಟರ್ ನಿಂದ ಶಾಕ್ ಹೊಡೆದು ಯುವತಿಯ ದಾರುಣ ಸಾವು

ಈ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಪಾಸ್: ಮಾಜಿ ಸಿಎಂ ಯಡಿಯೂರಪ್ಪ

ಭಾರತದ ಹರ್ನಾಜ್ ಕೌರ್ ಸಂಧುಗೆ ಮಿಸ್ ಯುನಿವರ್ಸ್ ಕಿರೀಟ

ಸ್ನೇಹಿತನ ಚಿನ್ನದಂಗಡಿಯಲ್ಲಿ ಕಳವು ನಡೆಸಲು ಸುಪಾರಿ ನೀಡಿದ ಇನ್ನೊಂದು ಚಿನ್ನದಂಗಡಿ ಮಾಲಿಕ!

ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಆನ್ ಲೈನ್ ಕವನ ಸ್ಪರ್ಧೆ

ಇತ್ತೀಚಿನ ಸುದ್ದಿ