ಕೋಲಾರ ಮೂಲದ ಬಾಡಿಬಿಲ್ಡರ್ ಅಮೆರಿಕದಲ್ಲಿ ಅಪಘಾತಕ್ಕೆ ಬಲಿ!

ಕೋಲಾರ: ಕೋಲಾರ ಮೂಲದ ಬಾಡಿ ಬಿಲ್ಡರ್ ವೊಬ್ಬರು ಅಮೆರಿಕದಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಕೋಲಾರದ ಗಾಂಧಿನಗರ ಬಡಾವಣೆ ನಿವಾಸಿ, ಚಲಪತಿ ಹಾಗೂ ಮುನಿಯಮ್ಮ ದಂಪತಿಯ ಪುತ್ರ ಸುರೇಶ್ ಕುಮಾರ್(42) ಮೃತಪಟ್ಟವರಾಗಿದ್ದಾರೆ. ಮೂರು ದಿನಗಳ ಹಿಂದೆ ಫ್ಲೋರಿಡಾ — ಟೆಕ್ಸಾಸ್‍ನಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಇವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಸುರೇಶ್ ಕುಮಾರ್ ಅವರು ಮಾಡೆಲಿಂಗ್ ಜೊತೆಗೆ ಹಲವು ನಟ ನಟಿಯರಿಗೂ ದೈಹಿಕ ತರಬೇತಿಯನ್ನು ನೀಡಿದ್ದರು. ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD