ಕೊಲ್ಕತ್ತಾದಲ್ಲಿ ಅತ್ಯಾಚಾರ-ಕೊಲೆ ಕೇಸ್: ನಾಲ್ಕು ಬಾರಿ ಮದುವೆಯಾಗಿದ್ದ ಆರೋಪಿ..! - Mahanayaka
10:31 AM Thursday 21 - August 2025

ಕೊಲ್ಕತ್ತಾದಲ್ಲಿ ಅತ್ಯಾಚಾರ-ಕೊಲೆ ಕೇಸ್: ನಾಲ್ಕು ಬಾರಿ ಮದುವೆಯಾಗಿದ್ದ ಆರೋಪಿ..!

11/08/2024


Provided by

ಕೋಲ್ಕತ್ತಾದಲ್ಲಿ ತರಬೇತಿ ವೈದ್ಯರೊಬ್ಬರ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಬಂಧಿಸಲಾದ ಪ್ರಮುಖ ಆರೋಪಿ ಸಂಜಯ್ ರಾಯ್ ನಾಲ್ಕು ಬಾರಿ ವಿವಾಹವಾಗಿದ್ದು ಮತ್ತು ಅವರ ಹಿಂದಿನ ಮೂವರು ಪತ್ನಿಯರು ಅವರ “ದುಷ್ಕೃತ್ಯ” ದಿಂದಾಗಿ ಅವರನ್ನು ತೊರೆದಿದ್ದರು ಎಂಬ ಮಾಹಿತಿ ಬಯಲಾಗಿದೆ.

ಇಂಡಿಯಾ ಟುಡೇ ಟಿವಿಯೊಂದಿಗಿನ ಸಂಭಾಷಣೆಯಲ್ಲಿ ಅವರ ನೆರೆಹೊರೆಯವರು ಈ ಹೇಳಿಕೆಯನ್ನು ನೀಡಿದ್ದಾರೆ. ಅವರ ಪ್ರಕಾರ, ರಾಯ್ ಅವರು ನಾಲ್ಕು ಬಾರಿ ವಿವಾಹವಾಗಿದ್ದರು. ಅವರ ಕೆಟ್ಟ ನಡವಳಿಕೆಯಿಂದಾಗಿ ಅವರ ಮೂವರು ಪತ್ನಿಯರು ಅವರನ್ನು ತೊರೆದಿದ್ದರು. ಅವರ ನಾಲ್ಕನೇ ಪತ್ನಿ ಕಳೆದ ವರ್ಷ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು.

ಆರೋಪಿ ಪದೇ ಪದೇ ಮದ್ಯ ಸೇವಿಸಿ ತಡರಾತ್ರಿ ಮನೆಗೆ ಮರಳುತ್ತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಆದರೆ ಈ ಮಧ್ಯೆ ಆರೋಪಿ ಸಂಜಯ್ ರಾಯ್ ಅವರ ತಾಯಿ ಮಾಲತಿ ರಾಯ್ ಅವರು ತಮ್ಮ ಮಗನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು ಅವರು ಪೊಲೀಸರ ಒತ್ತಡದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

“ನನ್ನ ಮಗ ನಿರಪರಾಧಿ. ಪೊಲೀಸರ ಒತ್ತಡದಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ “ಎಂದು ಆಕೆ ಹೇಳಿದ್ದಾರೆ.
ಉತ್ತರ ಕೋಲ್ಕತ್ತಾದ ಆರ್. ಜಿ. ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ನಾಗರಿಕ ಸ್ವಯಂಸೇವಕರಾದ ರಾಯ್ ಅವರನ್ನು ಶನಿವಾರ ಬಂಧಿಸಲಾಯಿತು. 31 ವರ್ಷದ ಸಂತ್ರಸ್ತೆಯ ಶವವು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು.

ನಾಲ್ಕು ಪುಟಗಳ ಶವಪರೀಕ್ಷೆಯ ವರದಿಯಲ್ಲಿ ಮಹಿಳೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಆಕೆಯ ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿದ್ದವು ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ