ಹನೂರು, ಕೊಳ್ಳೇಗಾಲದಲ್ಲಿ ಸೀರೆ, ಬ್ಯಾಗ್ ಬೆಡ್ ಶೀಟ್ ಜಪ್ತಿ! - Mahanayaka
3:50 PM Wednesday 22 - October 2025

ಹನೂರು, ಕೊಳ್ಳೇಗಾಲದಲ್ಲಿ ಸೀರೆ, ಬ್ಯಾಗ್ ಬೆಡ್ ಶೀಟ್ ಜಪ್ತಿ!

chamarajanagaraa
24/03/2023

ಚಾಮರಾಜನಗರ: ಚುನಾವಣಾ ಹಿನ್ನೆಲೆಯಲ್ಲಿ ಕುರುಡು ಕಾಂಚಾಣ ಜೋರಾಗಿದ್ದು ಹನೂರು ಹಾಗೂ ಕೊಳ್ಳೇಗಾಲದಲ್ಲಿ ಹಂಚಲು ದಾಸ್ತಾನು ಮಾಡಲಾಗಿದ್ದ ಸೀರೆ, ಸ್ಕೂಲ್ ಬ್ಯಾಗ್, ಬೆಡ್ ಶೀಟ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಚುನಾವಣಾ ಸಂಬಂಧ ಸೀರೆ ಹಂಚುವ ಉದ್ದೇಶದಿಂದ ದಾಸ್ತಾನಿಟ್ಟ ಖಚಿತ ಮಾಹಿತಿ ಮೇರೆಗೆ ಸಹಕಾರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 45 ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ

ಖರೀದಿಸಲು ಹಾಗೂ ದಾಸ್ತಾನಿಡಲು ಯಾವುದೇ ಪರವಾನಗಿ ಇಲ್ಲದಿದ್ದರಿಂದ ರಾಜಶೇಖರ್ ಮೂರ್ತಿ ಎಂಬವರ ಮೇಲೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹನೂರಲ್ಲಿ ಶಾಲಾ ಬ್ಯಾಗ್- ಬೆಡ್ ಶೀಟ್ ವಶ:

ಹನೂರು ಪಟ್ಟಣದ ಶ್ರೀರಂಗ ಏಜೆನ್ಸಿಸ್ ಗೋದಾಮಿನ ಮೇಲೆ ಪ‌.ವರ್ಗ ಕಲ್ಯಾಣಾಧಿಕರಿಗಳು ಹಾಗೂ ಪೊಲೀಸರು ದಾಳಿ ಮಾಡಿ ಹಂಚಲಿಟ್ಟಿದ್ದ 1700 ಜೊತೆ ಶೂಗಳು, 2 ಚೀಲ ಟವೆಲ್ ಗಳು, 630 ಶಾಲಾ ಬ್ಯಾಗ್ ಗಳು, 15 ಉಲ್ಲನ್ ಬೆಡ್ ಶೀಟ್ ಗಳನ್ನು ಜಪ್ತಿ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ