ಕೊಲ್ಲೂರು: ಸೌಪರ್ಣಿಕ ನದಿಪಾಲಾದ ಬೆಂಗಳೂರು ಮೂಲದ ಮಹಿಳೆ: ಮುಂದುವರಿದ ಹುಡುಕಾಟ

ಕೊಲ್ಲೂರು: ಸೌಪರ್ಣಿಕ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಮಹಿಳೆ ಇನ್ನೂ ಪತ್ತೆಯಾಗಿಲ್ಲ, ಕಳೆದ ಎರಡು ದಿನಗಳಿಂದ ಮಹಿಳೆಗಾಗಿ ನಿರಂತರವಾಗಿ ಹುಡುಕಾಟ ನಡೆಸಲಾಗ್ತಿದೆ.
ಬೆಂಗಳೂರಿನ ವಸುಧಾ(46) ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸಮೀಪದ ಸೌಪರ್ಣಿಕ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಆ.27ರಂದು ಈ ದುರ್ಘಟನೆ ನಡೆದಿದ್ದು, ಅವರು ಕಾಲು ಜಾರಿ ಸೌಪರ್ಣಿಕ ನದಿಗೆ ಬಿದ್ದು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮಹಿಳೆಯ ಪತ್ತೆಯಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅಗ್ನಿಶಾಮಕದಳ ಹುಡುಕಾಟ ನಡೆಸುತ್ತಿದೆ. ನೀರಿನ ರಭಸ ಹೆಚ್ಚಿರುವುದರಿಂದ ಹುಡುಕಾಟ ಕಾರ್ಯಾಚರಣೆ ಅಡ್ಡಿ ಉಂಟಾಗಿದೆ.
ನೀರುಪಾಲಾಗಿರುವ ಮಹಿಳೆ ವಸುಧಾ ಆಗಾಗ ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಆ.27ರಂದು ಕೂಡ ಆಗಮಿಸಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD