ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ಹಂಚಿಕೆ ಮಾಡಲಾಗಿದೆ? - Mahanayaka
10:44 AM Saturday 23 - August 2025

ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ಹಂಚಿಕೆ ಮಾಡಲಾಗಿದೆ?

basavaraj bommai
07/08/2021


Provided by

ಬೆಂಗಳೂರು: ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಇದೀಗ ಖಾತೆ ಹಂಚಿಕೆ ಕೂಡ ಮಾಡಲಾಗಿದ್ದು, ಹಣಕಾಸು, ಗೃಹ, ಗುಪ್ತಚರ (ಗೃಹ ಖಾತೆಯಿಂದ), ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮೊದಲಾದ ಖಾತೆಗಳನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿರುವ ಸಿಎಂ ಬೊಮ್ಮಾಯಿ ಉಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

 ಯಾರಿಗೆ ಯಾವ ಖಾತೆ?

*  ಬಸವರಾಜ ಬೊಮ್ಮಾಯಿ-ಮುಖ್ಯಮಂತ್ರಿ, DPAR, ಹಣಕಾಸು, ಗೃಹ, ಗುಪ್ತಚರ (ಗೃಹ ಖಾತೆಯಿಂದ), ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಹಾಗೂ ಮಿಕ್ಕ ಎಲ್ಲಾ ಖಾತೆಗಳು

*  ವಿ ಸೋಮಣ್ಣ:- ವಸತಿ

* ಶಂಕರ್ ಪಾಟೀಲ್ ಮುನೇನಕೊಪ್ಪ:- ಜವಳಿ, ಸಕ್ಕರೆ

* ಜೆ.ಸಿ ಮಾಧುಸ್ವಾಮಿ:- ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ

* ಮುರುಗೇಶ್ ನಿರಾಣಿ:- ಬೃಹತ್ ಹಾಗೂ ಮಧ್ಯಮ ಕೈಗಾರಿಕೆ

* ಸಿ. ಸಿ ಪಾಟೀಲ:- ಲೋಕೋಪಯೋಗಿ

* ಬಿ.ಸಿ ಪಾಟೀಲ್:- ಕೃಷಿ

* ಉಮೇಶ್ ಕತ್ತಿ:- ಅರಣ್ಯ, ಆಹಾರ, ಪಡಿತರ ವಿತರಣೆ, ಗ್ರಾಹಕ ವ್ಯವಹಾರ

* ಶಶಿಕಲಾ ಜೊಲ್ಲೆ:- ಮುಜರಾಯಿ, ಹಜ್ ಮತ್ತು ವಕ್ಫ್

* ಆರ್ ಅಶೋಕ:-ಕಂದಾಯ(ಮುಜರಾಯಿ ಹೊರತುಪಡಿಸಿ)

* ಎಸ್ ಟಿ ಸೋಮಶೇಖರ್:-ಸಹಕಾರ

* ಡಾ. ಸಿ. ಎನ್ ಅಶ್ವಥ ನಾರಾಯಣ:- ಉನ್ನತ ಶಿಕ್ಷಣ, ಐಟಿ-ಬಿಟಿ

* ಆರಗ ಜ್ಞಾನೇಂದ್ರ:- ಗೃಹ(ಗುಪ್ತಚರ ಹೊರತುಪಡಿಸಿ)

* ಕೆ ಗೋಪಾಲಯ್ಯ:- ಅಬಕಾರಿ

* ಡಾ. ಸುಧಾಕರ್:-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

* ಕೆ. ಸಿ ನಾರಾಯಣ ಗೌಡ:- ಕ್ರೀಡೆ, ಯುವಜನ, ಕೌಶಲ್ಯಾಭಿವೃದ್ಧಿ, ರೇಷ್ಮೆ

* ಬೈರತಿ ಬಸವರಾಜ್:- ನಗರಾಭಿವೃದ್ಧಿ

* ಕೆಎಸ್ ಈಶ್ವರಪ್ಪ:-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

* ಗೋವಿಂದ ಕಾರಜೋಳ:- ಮಧ್ಯಮ ಹಾಗೂ ಮಧ್ಯಮ ಜಲ ಸಂಪನ್ಮೂಲ

* ಹಾಲಪ್ಪ ಆಚಾರ್:- ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹಿರಿಯ ನಾಗರಿಕರ ಸಬಲೀಕರಣ

* ಆನಂದ್ ಸಿಂಗ್:- ಪ್ರವಾಸೋದ್ಯಮ, ಪರಿಸರ

* ಕೋಟಾ ಶ್ರೀನಿವಾಸ ಪೂಜಾರಿ:- ಹಿಂದುಳಿದ ವರ್ಗ ಕಲ್ಯಾಣ

*  ಪ್ರಭು ಚೌವಾಣ್:- ಪಶು ಸಂಗೋಪಣೆ

* ಸುನಿಲ್ ಕುಮಾರ್:- ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ

*  ಬಿ. ಸಿ ನಾಗೇಶ್:- ಪ್ರಾಥಮಿಕ ಶಿಕ್ಷಣ ಹಾಗೂ ಸಕಾಲ

* ಎಸ್ ಅಂಗಾರ:- ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ

*  ಬಿ ಶ್ರೀರಾಮುಲು-: ಸಾರಿಗೆ, ಎಸ್ ಟಿ ಅಭಿವೃದ್ಧಿ

* ಶಿವರಾಂ ಹೆಬ್ಬಾರ್:- ಕಾರ್ಮಿಕ

* ಮುನಿರತ್ನ:- ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ

* ಎಂ. ಟಿ. ಬಿ ನಾಗರಾಜ್:-ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ

ಇತ್ತೀಚಿನ ಸುದ್ದಿ