“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ - Mahanayaka
12:23 AM Thursday 21 - August 2025

“ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಎಸ್ ಡಿಪಿಐ ಆಕ್ರೋಶ

n mahesh joins bjp
06/08/2021


Provided by

ಬೆಂಗಳೂರು: ಮಾಜಿ ಸಚಿವ, ಶಾಸಕ ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ) ಸಾಮಾಜಿಕ ಜಾಲತಾಣ ವಿಭಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಜಾತ್ಯತೀತ ತತ್ವಾದರ್ಶದಡಿಯಲ್ಲಿ ರಾಜಕೀಯ ಭವಿಷ್ಯ ರೂಪಿಸಿಕೊಂಡು ಈಗ ಕೋಮುವಾದಿ ಬಿಜೆಪಿಯನ್ನು ಅಪ್ಪಿಕೊಂಡಿರುವ ಎನ್.ಮಹೇಶ್ ಅವರ ನಡೆ, ಅಹಿಂದ ವರ್ಗಕ್ಕೆ ಮಾಡಿರುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಬಿಜೆಪಿಯು ಅಹಿಂದ ವರ್ಗಕ್ಕೆ ಬಹಿರಂಗ ಶತ್ರು ಎಂಬ ವಾಸ್ತವ ಅರಿತಿದ್ದರೂ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಿದ್ಧಾಂತ ಪಣಕ್ಕಿಟ್ಟಿರುವ ಅವರು, “ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸ್ತು” ಎನ್ನುವಂತೆ ತಮ್ಮ ಬೆಂಬಲಿಗರನ್ನು ಕೂಡ ಬಿಜೆಪಿಗೆ ಸೇರಿಸುತ್ತಿರುವುರನ್ನು ನಾಡಿನ ಜತೆ ಕ್ಷಮಿಸುವುದಿಲ್ಲ ಎಂದು ಹೇಳಿದೆ.

ನಿನ್ನೆಯಷ್ಟೇ ಎನ್.ಮಹೇಶ್ ಅವರು ಮಾಜಿ ಹಾಗೂ ಹಾಲಿ ಸಿಎಂಗಳ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಸಂಬಂಧ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ನಡುವೆ ಕಳೆದ ಚುನಾವಣೆಯಲ್ಲಿ ಎನ್.ಮಹೇಶ್ ಅವರನ್ನು ಎಸ್ ಡಿಪಿಐ ಬೆಂಬಲಿಸಿತ್ತು. ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆಯೇ, ಎಸ್ ಡಿಪಿಐ ಎನ್.ಮಹೇಶ್ ಅವರನ್ನು ಬೆಂಬಲಿಸಿದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳಾಗಿತ್ತು. ಈ ನಡುವೆ ಎನ್.ಮಹೇಶ್ ವಿರುದ್ಧ ಎಸ್ ಡಿಪಿಐ ಸಾಮಾಜಿಕ ಜಾಲತಾಣ ವಿಭಾಗ ಇದೀಗ ಆಕ್ರೋಶ ವ್ಯಕ್ತಪಡಿಸಿದೆ.

sdpi

ಇನ್ನಷ್ಟು ಸುದ್ದಿಗಳು….

ಬಿಗ್ ನ್ಯೂಸ್:  ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್

ಕೊನೆಗೂ ಕಮಲ ಮುಡಿದ ಕೊಳ್ಳೇಗಾಲ ಶಾಸಕ ಎನ್.ಮಹೇಶ್! | ಮಾಜಿ, ಹಾಲಿ ಸಿಎಂ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ

ಸಿಎಂ ರೇಸ್ ನಲ್ಲಿದ್ದ ಬೆಲ್ಲದ್ ಗೆ ಸಚಿವ ಸ್ಥಾನವೂ ಸಿಗಲಿಲ್ಲ | ಶೆಟ್ಟರ್, ಬಿಎಸ್ ವೈಗೆ ಧಿಕ್ಕಾರ ಹೇಳಿದ ಬೆಂಬಲಿಗರು

“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”

ಅಪ್ರಾಪ್ತೆಯರನ್ನು ಗರ್ಭಿಣಿಯಾಗಿಸಿ ಪರಾರಿಯಾಗುತ್ತಿದ್ದಾತನನ್ನು ಉಪಾಯವಾಗಿ ಬಂಧಿಸಿದ ಮಹಿಳಾ ಎಸ್ ಐ!

ಇತ್ತೀಚಿನ ಸುದ್ದಿ