ಕೊಟ್ಟಿಗೆಹಾರ | ಮಲೆನಾಡಿನಲ್ಲಿ ಮತ್ತೆ ಕಾಡುಕೋಣ ದಾಳಿ ಪ್ರಕರಣ - Mahanayaka

ಕೊಟ್ಟಿಗೆಹಾರ | ಮಲೆನಾಡಿನಲ್ಲಿ ಮತ್ತೆ ಕಾಡುಕೋಣ ದಾಳಿ ಪ್ರಕರಣ

chikkamagaluru
07/10/2025

ಕೊಟ್ಟಿಗೆಹಾರ:  ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡುಕೋಣ ದಾಳಿಗಳು ನಿಯಮಿತವಾಗುತ್ತಿದ್ದು, ಜನತೆ ಆತಂಕದಲ್ಲಿದ್ದಾರೆ. ವಾರದಲ್ಲಿ ಒಂದು–ಎರಡು ಕಡೆ ಕಾಡುಕೋಣ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ರೈತರ ಬದುಕು ಕಂಗಾಲಾಗುತ್ತಿದೆ.


Provided by

ಇಂದು ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮಕ್ಕಿಮನೆ ಗ್ರಾಮದಲ್ಲಿ ರೈತ ರಾಜು (55) ಕಾಡುಕೋಣ ದಾಳಿಗೆ ಒಳಗಾಗಿದ್ದಾರೆ. ಮನೆ ಬಳಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದ್ದು, ರಾಜುವಿನ ತೊಡೆ ಭಾಗ ಗಂಭೀರವಾಗಿ ಗಾಯಗೊಂಡಿದೆ.

ನಿರಂತರ ಕಾಡುಕೋಣ ದಾಳಿಗಳಿಂದಾಗಿ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ. ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ