ಬದಲಾವಣೆ ಸಾಧ್ಯವಿಲ್ಲ ಎನ್ನಲು ಕೃಷಿ ಕಾಯ್ದೆಗಳು ಧಾರ್ಮಿಕ ಗ್ರಂಥಗಳಲ್ಲ | ಫಾರೂಕ್ ಅಬ್ದುಲ್ಲಾ - Mahanayaka
11:38 PM Saturday 13 - December 2025

ಬದಲಾವಣೆ ಸಾಧ್ಯವಿಲ್ಲ ಎನ್ನಲು ಕೃಷಿ ಕಾಯ್ದೆಗಳು ಧಾರ್ಮಿಕ ಗ್ರಂಥಗಳಲ್ಲ | ಫಾರೂಕ್ ಅಬ್ದುಲ್ಲಾ

10/02/2021

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳು ಬದಲಾವಣೆ ಮಾಡದೇ ಇರಲು ಅದೇನು ಧಾರ್ಮಿಕ ಗ್ರಂಥಗಳಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಲೋಕಸಭೆಯಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಿ, ಸರ್ಕಾರ ಶೀಘ್ರವೇ ಒಂದು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ಕುರಿತು ನಾನು ಈ ಮನವಿ ಮಾಡುತ್ತಿದ್ದೇನೆ. ನೀವು ಪರಿಚಯಿಸಿರುವ ಈ ಕೃಷಿ ಕಾಯ್ದೆಗಳು ಬದಲಾವಣೆಯನ್ನೇ ಮಾಡಲು ಸಾಧ್ಯವಾಗದ ಧಾರ್ಮಿಕ ಗ್ರಂಥಗಳಲ್ಲ. ಬದಲಾವಣೆ ಮಾಡಬಾರದು ಎಂದೇನೂ ಇಲ್ಲ. ನಾವು ಕಾನೂನನ್ನು ರೂಪಿಸಿದ್ದೇವೆ. ರೈತರಿಗೆ ಅದು ಬೇಡವೆಂದರೆ, ಅವರೊಂದಿಗೆ ಏಕೆ ನೀವು ಸೂಕ್ತ ರೀತಿ ಮಾತನಾಡುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ