ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಇರಿದು ಕೊಂದ ತಂದೆ -ಮಗ - Mahanayaka

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಇರಿದು ಕೊಂದ ತಂದೆ -ಮಗ

mangalore
04/11/2021

ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಇರಿದು ಹತ್ಯೆ ಮಾಡಿರುವ ಘಟನೆ  ನಗರದ ಕಾರ್ ಸ್ಟ್ರೀಟ್ ನಲ್ಲಿ ಬುಧವಾರ ರಾತ್ರಿ ನಡೆದಿದ್ದು, ಹತ್ಯೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.

ಇಲ್ಲಿನ ವೀರ ವೆಂಕಟೇಶ್ ಎಂಬ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ್ ಕಾಮತ್ ಎಂಬವರು ಹತ್ಯೆಗೀಡಾದವರಾಗಿದ್ದು, ಇದೇ ಅಪಾರ್ಟ್ ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಹಾಗೂ ಆತನ ಪುತ್ರ ಅವಿನಾಶ್ ಕಿಣಿ ಹತ್ಯೆ ಆರೋಪಿಗಳಾಗಿದ್ದಾರೆ.

ವಿನಾಯಕ್ ಕಾಮತ್ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನ ಗೇಡಿನ ಎದುರು ರಸ್ತೆಯನ್ನು ಮನಪಾದ ವತಿಯಿಂದ ಇತ್ತೀಚೆಗೆ ಸಿಮೆಂಟ್ ಹಾಕಿ ಸರಿಪಡಿಸಲಾಗಿತ್ತು. ಇದರ ಮೇಲೆ ಬೇರೆಯವರ ಕಾರು ಚಲಾಯಿಸಿಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ವಿನಾಯಕ್ ಕಾಮತ್ ಜೊತೆಗೆ ಆರೋಪಿಗಳಾಗಿರುವ ತಂದೆ ಮಗ ಜಗಳ ಕಾಯುತ್ತಿದ್ದರು ಎನ್ನಲಾಗಿದೆ.

ಬುಧವಾರ ರಾತ್ರಿ 11 ಗಂಟೆಯ ವೇಳೆಗೆ ಕೂಡ ಇವರ ನಡುವೆ ಜಗಳವಾಗಿದ್ದು, ಈ ವೇಳೆ ವಿನಾಯಕ್ ಕಾಮತ್ ಗೆ ಕೃಷ್ಣಾನಂದ ಕಿಣಿ ಚೂರಿಯಿಂದ ಇರಿದಿದ್ದಾನೆ. ತಕ್ಷಣವೇ ವಿನಾಯಕ್ ಕಾಮತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ವಿನಾಯಕ್ ಕಾಮತ್ ಅವರ ಪತ್ನಿ ಅಮಣಿ ಕಾಮತ್ ಅವರು ಬಂದರ್ ಠಾಣೆಗೆ ನೀಡಿರುವ ದೂರಿನನ್ವಯ ಕೃಷ್ಣಾನಂದ ಕಿಣಿ ಹಾಗೂ ಆತನ ಪುತ್ರ ಅವಿನಾಶ್ ಕಿಣಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ