ಯೂಟ್ಯೂಬ್ ನೋಡಿ ಬೆಂಕಿ ಹಚ್ಚಿಕೊಂಡು ಕ್ಷೌರ ಮಾಡಿದ ಬಾಲಕನ ದಾರುಣ ಸಾವು! - Mahanayaka

ಯೂಟ್ಯೂಬ್ ನೋಡಿ ಬೆಂಕಿ ಹಚ್ಚಿಕೊಂಡು ಕ್ಷೌರ ಮಾಡಿದ ಬಾಲಕನ ದಾರುಣ ಸಾವು!

fire haircut
24/03/2021


Provided by

ತಿರುವನಂತಪುರಂ:  ಯೂಟ್ಯೂಬ್ ನೋಡಿ ಕ್ಷೌರ ಮಾಡಲು ಹೋದ ಬಾಲಕನೋರ್ವ ದುರಂತವಾಗಿ ಸಾವಿಗೀಡಾದ ಘಟನೆ ತಿರುವನಂತಪುರಂನ ವೆಂಗನೂರಿನಲ್ಲಿ ನಡೆದಿದ್ದು, 12 ವರ್ಷ ವಯಸ್ಸಿನ ಬಾಲಕ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾನೆ.

12 ವರ್ಷ ವಯಸ್ಸಿನ ಶಿವನಾರಾಯನ್ ಮೃತ ಬಾಲಕನಾಗಿದ್ದು, ಈತ ತಿರುವನಂತಪುರಂನ ವೆಂಗನೂರು ನಿವಾಸಿಯಾಗಿದ್ದಾನೆ. ಯೂಟ್ಯೂಬ್ ನ್ನು ನೋಡಿ ತಲೆಗೆ ಬೆಂಕಿ ಹಚ್ಚಿಕೊಂಡು ಕ್ಷೌರ ಮಾಡಲು ಬಾಲಕ ಯತ್ನಿಸಿದ್ದು, ಈ ವೇಳೆ ಬೆಂಕಿ ತಲೆಯನ್ನು ವ್ಯಾಪಿಸಿ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ವೆಂಗನೂರ್ ನ ಬಾಲಕರ ಪ್ರೌಢ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಯಾಗಿರುವ ಶಿವನಾರಾಣನ್ ಯೂಟ್ಯೂಬ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದ. ಈತ ಇಂತಹದ್ದೊಂದು ಅಪಾಯಕಾರಿ ಪ್ರಯತ್ನ ಮಾಡುತ್ತಾನೆ ಎಂದು ಮನೆಯಲ್ಲಿದ್ದ ಹುಡುಗನ ಅಜ್ಜಿ ಮತ್ತು ಸಹೋದರನಿಗೂ ತಿಳಿದಿರಲಿಲ್ಲ. ಬಾಲಕ ತಲೆಗೆ ಸೀಮೆ ಎಣ್ಣೆ ಹಾಕಿದ್ದರಿಂದ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

10 ದಿನ ಸಾವಿನೊಂದಿಗೆ ಹೋರಾಡಿ ಕೊನೆಗೆ ಮೃತಪಟ್ಟ ವಿದ್ಯಾರ್ಥಿನಿ!

ಇತ್ತೀಚಿನ ಸುದ್ದಿ