ರಾಷ್ಟ್ರಮಟ್ಟದಲ್ಲಿ 16 ಪ್ರಶಸ್ತಿಗಳಿಗೆ ಕೆಎಸ್‌ ಆರ್‌ ಟಿಸಿ ಆಯ್ಕೆ - Mahanayaka
10:55 AM Friday 12 - December 2025

ರಾಷ್ಟ್ರಮಟ್ಟದಲ್ಲಿ 16 ಪ್ರಶಸ್ತಿಗಳಿಗೆ ಕೆಎಸ್‌ ಆರ್‌ ಟಿಸಿ ಆಯ್ಕೆ

ksrtc
31/08/2024

ಬೆಂಗಳೂರು: ಸಾರಿಗೆ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ 16 ಪ್ರಶಸ್ತಿಗೆ ಕೆಎಸ್‌ ಆರ್‌ ಟಿಸಿ ಆಯ್ಕೆಯಾಗಿದೆ.

ಪಲ್ಲಕ್ಕಿ ಬ್ರ್ಯಾಂಡಿಂಗ್‌ ಗಾಗಿ ಅತ್ಯುತ್ತಮ ‘ಪ್ರಾಡಕ್ಟ್‌ ಪ್ಲೇಸ್‌ಮೆಂಟ್‌’ ಪ್ರಶಸ್ತಿ, ಅಶ್ವಮೇಧ ಬ್ರ್ಯಾಂಡಿಂಗ್‌ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ ಪ್ರಶಸ್ತಿ, ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಪ್ರಶಸ್ತಿ, ಅಶ್ವಮೇಧ ಬ್ರ್ಯಾಂಡಿಂಗ್‌ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಪ್ರಶಸ್ತಿ, ಪಲ್ಲಕ್ಕಿ ಬ್ರ್ಯಾಂಡಿಂಗ್‌ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ಪ್ರಶಸ್ತಿಗೆ ಆಯ್ಕೆಯಾಗಿದೆ.

ಅಂಬಾರಿ ಉತ್ಸವದ ಬ್ರ್ಯಾಂಡಿಂಗ್‌ ಗೆ ಇನ್‌ ಸ್ಟಾಗ್ರಾಂ ಕ್ಯಾಂಪೇನ್‌ ವಿಭಾಗದ ಪ್ರಶಸ್ತಿ, ಅಶ್ವಮೇಧ ಬ್ರ್ಯಾಂಡಿಂಗ್‌ ಗೆ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ ಪ್ರಶಸ್ತಿ, ಕೆಎಸ್‌ ಆರ್‌ ಟಿಸಿಗೆ ಶ್ರೇಷ್ಠ ವಿಡಿಯಾ ಕಂಟೆಂಟ್ ಬ್ರ್ಯಾಂಡ್‌ ಎಂಟರ್ಪ್ರೈಸ್‌ ಪ್ರಶಸ್ತಿ ಪ್ರದಾನ ಮಾಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ