ನಿಮ್ಮಿಂದ ಅಧಿಕಾರ ಕಲಿಯಬೇಕಿಲ್ಲ, ಕಾಲು ಕಟ್ ಮಾಡಿ ಕುದುರೆ ಓಡಿಸು ಅಂದ್ರೆ ಹೇಗೆ ಓಡ್ಸೋದು | ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ವಾಗ್ದಾಳಿ - Mahanayaka
11:22 PM Monday 15 - December 2025

ನಿಮ್ಮಿಂದ ಅಧಿಕಾರ ಕಲಿಯಬೇಕಿಲ್ಲ, ಕಾಲು ಕಟ್ ಮಾಡಿ ಕುದುರೆ ಓಡಿಸು ಅಂದ್ರೆ ಹೇಗೆ ಓಡ್ಸೋದು | ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ವಾಗ್ದಾಳಿ

h d kumaraswamy
01/03/2023

ಚಿಕ್ಕಮಗಳೂರು:   ಸಿದ್ದರಾಮಯ್ಯ ಅವರೇ, ಪದೇ–ಪದೇ ಜೆಡಿಎಸ್ ಬಗ್ಗೆ ಚರ್ಚೆ ಮಾಡ್ಬೇಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಂದಿದ್ದೀರಾ… ಬಿಜೆಪಿಯದ್ದು ಮಾತ್ರವಲ್ಲ, ನಿಮ್ಮದೂ ಪಾಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಹೆಚ್ ಡಿಕೆ, ಸಿದ್ದರಾಮಯ್ಯ  ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಗೆ ಹೋಗೋ ಮುನ್ನ ಯೋಜನೆ ಜಾರಿ ಮಾಡಿದ್ರಿ, ಆದರೆ ದುಡ್ಡು ಇಟ್ಟಿರಲಿಲ್ಲ, ನಿಮ್ಮ ತಪ್ಪನ್ನ ಸರಿಪಡಿಸಲು ಆಗದಂತಹ ವಾತಾವರಣ ನಿರ್ಮಿಸಿದ್ದೀರಾ, ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಕಾಲ ಕಳೆಯುತ್ತಿದ್ದರು ಎಂದಿದ್ದೀರಾ, ಇಡೀ‌ ದಿನ ಜನರ ಸಂಪರ್ಕದಲ್ಲಿ ಇರುತ್ತಿದ್ದೆ, ದಿನಕ್ಕೆ10–15 ಸಭೆ ಮಾಡ್ತಿದ್ದೆ, ನೀವು ಸಿಎಂ ಆದಾಗ ಮಧ್ಯಾಹ್ನ 1ಕ್ಕೆ ವಿಧಾನಸೌಧ ಖಾಲಿ ಮಾಡ್ತಿದ್ರಿ, ಎಲ್ಲಿ ಹೋಗ್ತಿದ್ರಿ ಎಂದು ಪ್ರಶ್ನಿಸಿದರು.

ನನಗೆ ಒಂದು ಮನೆ ಕೊಡಲಿಲ್ಲ, ಜನ ತಿರಸ್ಕಾರ ಮಾಡಿದ್ರು ಮನೆ ಬಳಸಿಕೊಂಡ್ರಿ, ಕುಮಾರಕೃಪವನ್ನ ಹೇಗೆ ಬಳಸಿಕೊಂಡ್ರಿ ನನಗೆ ಗೊತ್ತಿದೆ, ನಾನು ಎಲ್ಲಿ ಇರಬೇಕಿತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಹಣ ನೀಡಿದ್ದೇನೆ. ಅದರ ದಾಖಲೆ ಬಿಡುಗಡೆಗೂ ನಾನು ಸಿದ್ಧ. ನಾನು ನಿಮ್ಮಿಂದ ಆಡಳಿತ ಕಲಿಯಬೇಕಾಗಿಲ್ಲ. ಕೊಟ್ಟ ಕುದುರೆ, ಕುದುರೆ… ಯಾವ ಕೊಟ್ಟ ಕುದುರೆ, ಕಾಲು ಕಟ್ ಮಾಡಿ ಓಡಿಸು ಅಂದ್ರೆ ಹೇಗೆ ಓಡ್ಸೋದು, ಜನ ಯಾರ ಆಡಳಿತ ಹೇಗೆ ಅಂತ ನೋಡಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನನ್ನಷ್ಟು ಜನರನ್ನ ಯಾರೂ ನೋಡಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ