ಸಿಎಂ ಸಿದ್ದರಾಮಯ್ಯ ಕ್ರಿಕೆಟ್ ನೋಡಿದ್ದಕ್ಕೆ ಕುಮಾರಸ್ವಾಮಿ ಕಿಡಿ - Mahanayaka

ಸಿಎಂ ಸಿದ್ದರಾಮಯ್ಯ ಕ್ರಿಕೆಟ್ ನೋಡಿದ್ದಕ್ಕೆ ಕುಮಾರಸ್ವಾಮಿ ಕಿಡಿ

hdk siddaramaiah
21/10/2023


Provided by

ಬೆಂಗಳೂರು: ರಾಜ್ಯದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದರೆ ಇವರು ಕ್ರಿಕೆಟ್ ಮ್ಯಾಚ್ ನೋಡೋಕೆ ಹೋಗಿದ್ದಾರೆ. ಭಾರತ ತಂಡ (Team India) ಆಡುವಾಗ ಬೆಂಬಲ ಕೊಡುತ್ತಿದ್ದರೆ ಪರವಾಗಿಲ್ಲ. ಆದ್ರೆ ಬೇರೆ ಮ್ಯಾಚ್ ನೋಡೋದಕ್ಕೆ ಇಡೀ ಸಿಎಂ, ಡಿಸಿಎಂ, ಪಟಾಲಂ ಹೋಗಿದೆ. ಬರದ ಸಮಸ್ಯೆ ಇದ್ದರು ಮ್ಯಾಚ್ ನೋಡೋಕೆ ಹೋಗೋದು ಎಷ್ಟು ಸರಿ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತ್ರಿ 8 ಗಂಟೆ ಮ್ಯಾಚ್ ನೋಡೊಕೆ ನಿಮಗೆ ಸಮಯ ಇದೆ. ಜನರ ಕರೆಂಟ್ ಸಮಸ್ಯೆಗೆ ಪರಿಹಾರ ಮಾಡೋಕೆ ಆಗುತ್ತಿಲ್ವಾ..? ಮೊಸಳೆಯನ್ನ ತಂದು ಪ್ರತಿಭಟನೆ ಮಾಡ್ತಿದ್ದಾರೆ. ಇಂತಹ ಸಮಯದಲ್ಲಿ ಮ್ಯಾಚ್ ನೋಡೋ ಅವಶ್ಯಕತೆ ಇತ್ತಾ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ರಾಜ್ಯದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದರೆ ಇವರು ಕ್ರಿಕೆಟ್ ಮ್ಯಾಚ್ ನೋಡೊಕೆ ಹೋಗಿದ್ದಾರೆ. ಅಲ್ಲೇನು ಪಾಕಿಸ್ತಾನಕ್ಕೆ ಬೆಂಬಲ ಕೊಡೋಕೆ ಹೋಗಿದ್ರಾ? ಅಥವಾ ಆಸ್ಟ್ರೇಲಿಯಾಗೆ ಬೆಂಬಲ ಕೊಡೋಕೆ ಹೋಗಿದ್ರಾ? ಎಂದು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.?

ಅಂದ್ಹಾಗೆ ನಿನ್ನೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆದಿದ್ದ ಪಾಕ್‌ / ಆಸ್ಟ್ರೇಲಿಯಾ ಕ್ರಿಕೇಟ್‌ ಪಂದ್ಯಾವಳಿ ವೀಕ್ಷಣೆಗೆ ಹೋಗಿದ್ದರು.

ಇತ್ತೀಚಿನ ಸುದ್ದಿ