ಕುರಿಗಾಹಿಗಳನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ ನಡೆಸಿದ ಜಮೀನು ಮಾಲಿಕ - Mahanayaka
9:24 PM Wednesday 27 - August 2025

ಕುರಿಗಾಹಿಗಳನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ ನಡೆಸಿದ ಜಮೀನು ಮಾಲಿಕ

kurigahi
28/06/2021


Provided by

ಮಂಡ್ಯ: ಜಮೀನಿಗೆ ಕುರಿಗಳನ್ನು ಬಿಟ್ಟ ಎಂದು  ಕುರಿಗಾಹಿ ಬಾಲಕ ಮತ್ತು ಆತನ ಸಂಬಂಧಿಕನನ್ನು ಜಮೀನಿನ ಮಾಲಿಕ ಮರಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದಲ್ಲಿ ನಡೆದಿದೆ.

ಶಿರಾ ಮೂಲದ ಕುರಿಗಾಹಿ ದೌರ್ಜನ್ಯಕ್ಕೊಳಗಾದವರಾಗಿದ್ದಾರೆ.  ತಮ್ಮ ಕುರಿ ಮಂದೆಯನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಕುರಿಗಳು  ಹರ್ಷ ಎಂಬಾತನ ಜಮೀನಿಗೆ ನುಗ್ಗಿವೆ.  ಕುರಿಗಳನ್ನು ವಾಪಸ್ ತರಲು  ಕುರಿಗಾಹಿಗಳು ತೋಟಕ್ಕೆ ನುಗ್ಗಿದ್ದಾರೆನ್ನಲಾಗಿದೆ. ಈ ವೇಳೆ ಜಮೀನಿನ ಮಾಲಿಕ ತನ್ನ ತೋಟದ ಕೆಲಸಗಾರರ ಸಹಾಯದಿಂದ ಕುರಿಗಾಹಿ ಬಾಲಕ ಹಾಗೂ ಆತನ ಸಂಬಂಧಿತನ್ನು ತೋಟದ ಮರಕ್ಕೆ ಕಟ್ಟಿಹಾಕಿ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಇನ್ನೂ ಬಾಲಕನ ರೋದನೆ ಕೇಳಲು ಸಾಧ್ಯವಾಗದೇ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು, ಪೊಲೀಸರನ್ನು ಕರೆತಂದು ಕುರಿಗಾಹಿಗಳನ್ನು ರಕ್ಷಣೆ  ಮಾಡಿದ್ದಾರೆ. ಇನ್ನೂ ಘಟನೆ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ