ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್ - Mahanayaka

ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್

yathnal
04/09/2021


Provided by

ಹಾವೇರಿ: ಬಿ.ವೈ.ವಿಜಯೇಂದ್ರ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡಲಿ, ಆದರೆ ತಮ್ಮ ಪ್ರಾಬಲ್ಯ ಹೆಚ್ಚಿಸೋಕೆ ಪ್ರವಾಸ ಮಾಡೋದು ಬೇಡ. ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ ಎಂದು ಬಿ.ವೈ.ವಿಜಯೇಂದ್ರ ರಾಜ್ಯ ಪ್ರವಾಸದ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾನಗಲ್‌ ನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಮಾಜಿ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.  ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಯಾರೇ ಮುಖ್ಯಮಂತ್ರಿ ಇದ್ದರೂ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಸಹಜ ಎಂದು ಬೊಮ್ಮಾಯಿ ನೇತೃತ್ವದ ಚುನಾವಣೆಗೆ ಸಹಮತ ವ್ಯಕ್ತಪಡಿಸಿದರು.

ಪಂಚಮಸಾಲಿ ಹೋರಾಟದಲ್ಲಿ ಕೊಲೆ ಆರೋಪಿ ವಿನಯ ಕುಲಕರ್ಣಿ ಭಾಗವಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ವಿನಯ ಕುಲಕರ್ಣಿ ಆರೋಪ ಸಾಬೀತುವಾಗುವವರೆಗೆ ಅಪರಾಧಿಯಲ್ಲ. ಸಮುದಾಯದ ಸಲುವಾಗಿ ಬಂದಿದ್ದಾರೆ. ಜೈಲಲ್ಲಿ ಇದ್ದವರೇ ಮುಖ್ಯಮಂತ್ರಿ ಆಗಿದ್ರಲ್ಲಾ… ಎಂದು ಹೇಳುವ ಮೂಲಕ ಬಿ.ಎಸ್‌.ಯಡಿಯೂರಪ್ಪನವರಿಗೆ ಟಾಂಗ್ ನೀಡಿದರು.

ಇನ್ನಷ್ಟು ಸುದ್ದಿಗಳು…

ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ

ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ

ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ | ಸಿಎಂ ಬಸವರಾಜ್ ಬೊಮ್ಮಾಯಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ

ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ವಾಹನಗಳನ್ನು ತಡೆದ ಯುವತಿ | “ಏನಾಯ್ತಮ್ಮಾ…” ಎಂದು ಕೇಳಲು ಹೋದವರಿಗೆ ಅವಾಚ್ಯ ಬೈಗುಳ!

ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ

ಇತ್ತೀಚಿನ ಸುದ್ದಿ