ಕೈಕಟ್ಟಿ ನಿಲ್ಲಲು ನಾವೇನು ಗುಲಾಮರಾ ? | ಸುಮಲತಾ ವಿರುದ್ಧ ಗುಡುಗಿದ ಕುಮಾರಸ್ವಾಮಿ - Mahanayaka
9:37 AM Thursday 16 - October 2025

ಕೈಕಟ್ಟಿ ನಿಲ್ಲಲು ನಾವೇನು ಗುಲಾಮರಾ ? | ಸುಮಲತಾ ವಿರುದ್ಧ ಗುಡುಗಿದ ಕುಮಾರಸ್ವಾಮಿ

kumaraswamy
08/07/2021

ಬೆಂಗಳೂರು:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ವಾಕ್ಸಮರ ನಡೆಯುತ್ತಿದೆ. ಕೆಆರ್ ಎಸ್ ವಿಚಾರವಾಗಿ ಆರಂಭವಾದ ವಾಗ್ಯುದ್ಧ ಇದೀಗ ವೈಯಕ್ತಿಕವಾಗಿ ಪರಿವರ್ತಿತವಾಗಿದೆ.


Provided by

“ಅಂಬರೀಶ್ ಅವರ ಮುಂದೆ ಯಾರೆಲ್ಲ ಕೈಕಟ್ಟಿ ನಿಲ್ಲುತ್ತಿದ್ದರು ಎನ್ನುವುದು ನನಗೆ ಗೊತ್ತಿದೆ” ಎಂದು ಸುಮಲತಾ ಅಂಬರೀಶ್ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಅಂಬರೀಶ್ ಮುಂದೆ ಕುಮಾರಸ್ವಾಮಿ ಕೈಕಟ್ಟಿ ನಿಂತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನೂ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನಟ ಅಂಬರೀಶ್ ಮುಂದೆ ಕೈಕಟ್ಟಿ ನಿಲ್ಲಲು ನಾನೇನು ಅಂಬರೀಶ್ ಗೆ ಸ್ಲೇವ್(ಗುಲಾಮ) ಆಗಿದ್ದೇನಾ ? ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಅಂಬರೀಶ್ ಮುಂದೆ ಕೈಕಟ್ಟಿ ನಿಲ್ಲಲು ನಾವೇನು ಗುಲಾಮರಾ ? ಜನಸಾಮಾನ್ಯರು ಬಂದರೂ ನಾನು ಕೈಕಟ್ಟಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರಗಳನ್ನು ವೈಭವೀಕರಿಸುವ ಅಗತ್ಯವಿಲ್ಲ. ಈ ಮೂಲಕ ಅವರಿಗೆ ಸ್ಕೋಪ್ ಕೊಡಬೇಕಾಗಿಯೂ ಇಲ್ಲ. ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದವರು ನಾವು. ನಮ್ಮ ಬಗ್ಗೆ ಮಾತಾಡುವ ಯೋಗ್ಯತೆ ಸುಮಲತಾಗಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಇತ್ತೀಚಿನ ಸುದ್ದಿ