ಲಕ್ಷದ್ವೀಪ ಉಳಿಸಲು ಪ್ರಧಾನಿ ಮೋದಿಗೆ 93 ನಿವೃತ್ತ ಅಧಿಕಾರಿಗಳ ಸಹಿಯುಳ್ಳ ಪತ್ರ - Mahanayaka

ಲಕ್ಷದ್ವೀಪ ಉಳಿಸಲು ಪ್ರಧಾನಿ ಮೋದಿಗೆ 93 ನಿವೃತ್ತ ಅಧಿಕಾರಿಗಳ ಸಹಿಯುಳ್ಳ ಪತ್ರ

lakshadweep
07/06/2021


Provided by

ಕೊಚ್ಚಿ: ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ತೆಗೆದುಕೊಳ್ಳುತ್ತಿರುವ ವಿವಾದಾತ್ಮಕ ನಿರ್ಧಾರಗಳಿಂದ ದ್ವೀಪ ತತ್ತರಿಸಿದೆ. ಈ ಕ್ರಮಗಳ ವಿರುದ್ಧ ದೇಶದ ಹಿರಿಯ ನಿವೃತ್ತ ಅಧಿಕಾರಿಗಳ ಸಹಿಯನ್ನು ಕ್ರೂಢೀಕರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರವನ್ನು ಬರೆಯಲಾಗಿದೆ.

ಪ್ರಪುಲ್ ಪಟೇಲ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು  ತಮ್ಮ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.

ಲಕ್ಷದ್ವೀಪದ ಪರಿಸರ ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿ ಇರುವ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಆಡಳಿತಾಧಿಕಾರಿ ರೂಪಿಸಿರುವ ಪ್ರತಿ ನಿರ್ಣಯಗಳು ಅಭಿವೃದ್ಧಿಗೆ ಪೂರಕವಾಗಿಲ್ಲ, ಬದಲಿಗೆ ನಿರಂಕುಶ ಪ್ರಭುತ್ವದ ಸಂಕೇತದಂತೆ ಗೋಚರಿಸುತ್ತಿವೆ ಎಂದು ಅಧಿಕಾರಿಗಳು ತಮ್ಮ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಸಮಸ್ಯೆಯ ತೀವ್ರತೆಯನ್ನು  ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇನ್ನೊಂದೆಡೆ ಪ್ರಫುಲ್ ಪಟೇಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.

ಇತ್ತೀಚಿನ ಸುದ್ದಿ