ಆಲ್ಟೋ ಕಾರನ್ನು ಲಂಬೋರ್ಘಿನಿ ಕಾರಾಗಿ ಪರಿವರ್ತಿಸಿದ ಕೇರಳದ ಯುವಕ!

ಲಂಬೋರ್ಘಿನಿ ಕಾರು, ಎಲ್ಲ ಕಾರು ಪ್ರಿಯರ ಕನಸು. ಇಲ್ಲೊಬ್ಬ ಕೇರಳದ 26 ವರ್ಷದ ಯುವಕ ತನ್ನ ಮಾರುತಿ ಆಲ್ಟೋ ಕಾರನ್ನು ಲಂಬೋರ್ಘಿನಿ ಕಾರಾಗಿ ಪರಿವರ್ತಿಸಿ ಅಚ್ಚರಿ ಸೃಷ್ಟಿಸಿದ್ದಾನೆ.
ಮಿಲಿಯನ್ ಡಾಲರ್ ಬೆಲೆ ಬಾಳುವ ಕಾರನ್ನು ತಯಾರಿಸಲು ಕೇರಳದ ಯುವಕ ಬಿಬಿನ್, ಕಳೆದ ಮೂರು ವರ್ಷಗಳಿಂದಲೂ ಬೆವರು ಸುರಿಸಿ, ಶ್ರಮವಹಿಸುತ್ತಿದ್ದಾರೆ. ತಮ್ಮ ಮಾರುತಿ ಆಲ್ಟೋ ಕಾರನ್ನು ಲಂಬೋರ್ಘಿನಿ ಕಾರಾಗಿ ಪರಿವರ್ತಿಸುವ ಕೆಲಸ ಸುಮಾರು 70 ಶೇ.ದಷ್ಟು ಪೂರ್ಣಗೊಳಿಸಿದ್ದಾರೆ.
ಬಿಬಿನ್ ತನ್ನ ಲಂಬೋರ್ಘಿನಿ ಕಾರು, ಮಾರುತಿ ಸುಜುಕಿ ಆಲ್ಟೊ ಕಾರಾಗಿದ್ದು, ಅದೇ ಚಕ್ರಗಳನ್ನು ಬಳಸಲಾಗಿದೆ.ಇದು ಲಂಬೋರ್ಘಿನಿ-ಶೈಲಿಯ ಸ್ಟೀರಿಂಗ್ ವೀಲ್ ಅನ್ನು ಸಹ ಹೊಂದಿದೆ, ಅದನ್ನು ಅವರು ಮತ್ತೊಂದು ಕಾರಿನಿಂದ ಆರಿಸಿಕೊಂಡರು. ಬಟರ್ ಫ್ಲೈ ಬಾಗಿಲುಗಳು, ಕಾರ್ ಜ್ಯಾಕ್ ನಿಂದ ಚಾಲಿತ ನೋಸ್–ಲಿಫ್ಟ್ ವೈಶಿಷ್ಟ್ಯ ಮತ್ತು ವೈಪರ್ ಮೋಟಾರ್ ಅನ್ನು ಸಹ ಹೊಂದಿದೆ. ಎಲ್ಲವೂ ಗುಂಡಿಯನ್ನು ಒತ್ತುವ ಮೂಲಕ ಕಾರ್ಯನಿರ್ವಹಿಸುತ್ತದೆ.
ತಾನು ಈ ಕಾರನ್ನು ಕಳೆದ 3 ವರ್ಷಗಳಿಂದ ತಯಾರಿಸುತ್ತಿದ್ದೇನೆ. ಹೆಚ್ಚಾಗಿ ರಾತ್ರಿ ಸಮಯವನ್ನು ಈ ಕಾರನ್ನು ನಿರ್ಮಿಸಲು ಮೀಸಲಿಡುತ್ತೇನೆ. ಈ ಕಾರನ್ನು ಪರಿವರ್ತಿಸಲು ಸುಮಾರು 1.50 ಲಕ್ಷ ರೂಪಾಯಿಗಳನ್ನು ಈವರೆಗೆ ಹೂಡಿಕೆ ಮಾಡಿದ್ದಾರಂತೆ. ಶೇ.20ರಿಂದ 30ರಷ್ಟು ಕೆಲಸಗಳು ಇನ್ನೂ ಬಾಕಿ ಇದೆ. ಕಾರಿನ ಒಳಗಿನ ಕೆಲಸಗಳು ಇನ್ನೂ ಬಾಕಿ ಇದೆ. ಕುಷನಿಂಗ್ ಇನ್ನೂ ಅಳವಡಿಸಲಾಗಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD