ಮಳೆಯ ಅಬ್ಬರಕ್ಕೆ ಕುಸಿದುಬಿದ್ದ ಧರೆ: ಮನೆಯ ಗೋಡೆ ಕೊಟ್ಟಿಗೆಗೆ ಹಾನಿ - Mahanayaka
11:02 AM Wednesday 22 - October 2025

ಮಳೆಯ ಅಬ್ಬರಕ್ಕೆ ಕುಸಿದುಬಿದ್ದ ಧರೆ: ಮನೆಯ ಗೋಡೆ ಕೊಟ್ಟಿಗೆಗೆ ಹಾನಿ

chikkamagaluru
18/08/2025

ಚಿಕ್ಕಮಗಳೂರು:  ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದೆ.  ಮಳೆಯ ಅಬ್ಬರಕ್ಕೆ ಮನೆಯೊಂದರ ಹಿಂಭಾಗದಲ್ಲಿದ್ದ ಧರೆ ಕುಸಿತವಾಗಿರುವ ಘಟನೆ ಕೊಪ್ಪ ತಾಲೂಕಿನ ಮೀಗಾ ಗ್ರಾಮದಲ್ಲಿ ನಡೆದಿದೆ.

ಧರೆಯ ಮಣ್ಣು ಕುಸಿದ ಪರಿಣಾಮ ಮನೆಯ ಗೋಡೆ ಹಾಗೂ ಕೊಟ್ಟಿಗೆ ಕುಸಿತವಾಗಿದೆ. ಹರೀಶ್ ಭಟ್ ಎಂಬುವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಕುಸಿತವಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ