ನರ್ಸ್ ನಿಮಿಷಪ್ರಿಯ ರಕ್ಷಣೆಗೆ ಕೊನೆಯ ಪ್ರಯತ್ನ: ಎ.ಪಿ. ಉಸ್ತಾದ್ ಮಧ್ಯ ಪ್ರವೇಶದ ಬಳಿಕ ಹೊಸ ತಿರುವು - Mahanayaka

ನರ್ಸ್ ನಿಮಿಷಪ್ರಿಯ ರಕ್ಷಣೆಗೆ ಕೊನೆಯ ಪ್ರಯತ್ನ: ಎ.ಪಿ. ಉಸ್ತಾದ್ ಮಧ್ಯ ಪ್ರವೇಶದ ಬಳಿಕ ಹೊಸ ತಿರುವು

nimisha priya
15/07/2025

Mahanayaka–ಕೋಝೀಕೋಡ್:  ಯೆಮನ್ ನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ(Nimisha Priya) ಅವರನ್ನು ಬಿಡುಗಡೆಗೊಳಿಸಲು ಕೊನೆಯ ಹಂತದ ಪ್ರಯತ್ನಗಳು ಮುಂದುವರಿದಿದೆ.

ನಿಮಿಷ ಪ್ರಿಯಾ ಅವರ ರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಚೆಲ್ಲಿದ ನಂತರ ಕೊನೆಯ ಪ್ರಯತ್ನವಾಗಿ ಸೂಫಿ ಗುರು ಶೇಖ್ ಹಬೀಬ್ ಉಮರ್ ಬಿನ್ ಹಫೀಲ್ ನೇತೃತ್ವದಲ್ಲಿ ಮಹತ್ವದ ತುರ್ತು ಮಾತುಕತೆ ನಡೆಯುತ್ತಿದೆ.

ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್(A.P.Ustad )ಅವರ ಹಸ್ತಕ್ಷೇಪದ ಬಳಿಕ ಶೇಖ್ ಹಬೀಬ್ ಉಮರ್  ಅವರ ನಿಯೋಗವು ಉತ್ತರ ಯೆಮೆನ್ ನ ದಮಾರ್ ನಲ್ಲಿರುವ ಸಂತ್ರಸ್ತ ತಲಾಲ್ ಕುಟುಂಬದ ಪ್ರದೇಶಕ್ಕೆ ತೆರಳಿ ಮಾತುಕತೆ ನಡೆಸುತ್ತಿದೆ.

ನಿಮಿಷ ಪ್ರಿಯ ಕುಟುಂಬಸ್ಥರು, ಎಲ್ಲಾ ಆಶಾ ಭಾವನೆಗಳನ್ನೂ ಕಳೆದುಕೊಂಡಿದ್ದರು. ಆದರೆ, ಈ ಮಾತುಕತೆ ಆಶಾದಾಯಕವಾಗಿ ಸಾಗುತ್ತಿದೆ ಎಂದು ಹೇಳಲಾಗಿದೆ. ಪಿ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯ ಪ್ರವೇಶದಿಂದ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ.

ನಿಮಿಷ ಪ್ರಿಯಾ ಅವರ ಮರಣ ದಂಡನೆ ಜುಲೈ 16ರಂದು ಜಾರಿಗೊಳಿಸಲಾಗುವುದು ಎಂದು ವರದಿಗಳು ತಿಳಿಸಿದ್ದವು. ಯೆಮೆನ್ ನಲ್ಲಿ ವ್ಯಕ್ತಿಯೊಬ್ಬನ ಕೊಲೆ ಆರೋಪ ಹೊತ್ತಿರುವ ನರ್ಸ್ ನಿಮಿಷ ಪ್ರಿಯಾ  ಜೈಲು ಸೇರಿದ್ದರು. ಅವರಿಗೆ ಮರಣದಂಡನೆ ಶಿಕ್ಷೆ ಪ್ರಕಟವಾಗಿದೆ. ಜುಲೈ 16ರಂದು ಮರಣ ದಂಡನೆ ವಿಧಿಸಲಾಗುವುದು ಎನ್ನುವ ವರದಿಗಳ ಹಿನ್ನೆಲೆ ಅವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ