ಡಿಸಿಎಂ ಲಕ್ಷ್ಮಣ್ ಸವದಿ ಪುತ್ರನ ಕಾರಿಗೆ ಬಲಿಯಾದ ರೈತ | ನಿರ್ಲಕ್ಷ್ಯದ ಕಾರು ಚಾಲನೆಯ ಆರೋಪ - Mahanayaka
7:34 AM Wednesday 20 - August 2025

ಡಿಸಿಎಂ ಲಕ್ಷ್ಮಣ್ ಸವದಿ ಪುತ್ರನ ಕಾರಿಗೆ ಬಲಿಯಾದ ರೈತ | ನಿರ್ಲಕ್ಷ್ಯದ ಕಾರು ಚಾಲನೆಯ ಆರೋಪ

chidananda savadi
06/07/2021


Provided by

ಬಾಗಲಕೋಟೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಪರಿಣಾಮ  ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ.

58 ವರ್ಷ ವಯಸ್ಸಿನ  ಕುಡೆಲೆಪ್ಪ ಬೋಳಿ ಮೃತ ಬೈಕ್ ಸವಾರರಾಗಿದ್ದು,  ಕಳೆದ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಬೋಳಿ ಅವರು ಹೊಲದಲ್ಲಿ ಕೆಲಸ ಮುಗಿಸಿ ಬೈಕ್ ನಲ್ಲಿ  ಬರುತ್ತಿದ್ದ ವೇಳೆ ಚಿದಾನಂದ ಅವರ ಕಾರು ಡಿಕ್ಕಿಯಾಗಿದೆ. ಇನ್ನೂ ಡಿಸಿಎಂ ಪುತ್ರ ಅಜಾಗರೋಕತೆಯಿಂದ ವಾಹನ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

ಲಕ್ಷ್ಮಣ ಸವದಿಯವರ ಪುತ್ರ ಚಿದಾನಂದ ಪ್ರಯಾಣಿಸುತ್ತಿದ್ದ ಕೆಎ 22 ಎಂಸಿ 5151 ಸಂಖ್ಯೆಯ ಕಾರು ಇದಾಗಿದ್ದು, ಅಪಘಾತದ ಬಳಿಕ ತಮ್ಮ ವಾಹನದ ನಂಬರ್ ಪ್ಲೇಟ್ ನ್ನು ಜಖಂಗೊಳಿಸಿ ಪರಾರಿಯಾಗಲು ಚಿದಾನಂದ ಸವದಿ ಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನೂ ಅಪಘಾತದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಿದಾನಂದ್, ಅಪಘಾತವಾದ ಕಾರಿನಲ್ಲಿ ತಾನು ಇರಲಿಲ್ಲ, ತಾನು ಆ ಕಾರಿನ ಮುಂದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ