ಆಶಿಕಾ ವಿಡಿಯೋ ವೈರಲ್ ಬೆನ್ನಲ್ಲೇ ನಿರ್ದೇಶಕ ಸ್ಪಷ್ಟನೆ - Mahanayaka
7:25 AM Monday 15 - September 2025

ಆಶಿಕಾ ವಿಡಿಯೋ ವೈರಲ್ ಬೆನ್ನಲ್ಲೇ ನಿರ್ದೇಶಕ ಸ್ಪಷ್ಟನೆ

ashika ranganath
19/11/2022

ಇತ್ತೀಚೆಗೆ ಚಿತ್ರ ತಂಡಗಳು ಚಿತ್ರದ ಪ್ರಮೋಷನ್ ಗಾಗಿ ಚಿತ್ರ ವಿಚಿತ್ರ ಐಡಿಯಾಗಳ ಮೊರೆ ಹೋಗುತ್ತಿದ್ದಾರೆ. ಈ ಪೈಕಿ ಇದೀಗ ನಟಿಯೊಬ್ಬರು ಕೆಟ್ಟ ಹೆಸರು ಪಡೆದುಕೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಇದೀಗ ನಟಿಯ ಕ್ಷಮೆ ಯಾಚಿಸಿದ್ದಾರೆ.


Provided by

ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಆಶಿಕಾ ರಂಗನಾಥ್  ಅಮಲಿನಲ್ಲಿ ತೇಲುತ್ತಾ ಅಸಭ್ಯ ಸನ್ನೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿತ್ತು. ಈ ವಿಡಿಯೋ ಭಾರೀ ಟ್ರೋಲ್ ಆದ ಬಳಿಕ ನಿರ್ದೇಶಕ ಪವನ್ ಒಡೆಯರ್ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರೇಮೋ ಚಿತ್ರದ ಪ್ರಮೋಷನ್ ಗಾಗಿ ಇಂತಹದ್ದೊಂದು ವಿಡಿಯೋವನ್ನು ಚಿತ್ರ ತಂಡ ಮಾಡಿತ್ತು. ಈ ವಿಡಿಯೋ ಕಂಡ ಸಂಪ್ರದಾಯವಾದಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಶಿಕಾ ರಂಗನಾಥ್ ವಿರುದ್ಧ ಮುಗಿಬಿದ್ದಿದ್ದು, ಅಸಭ್ಯ, ಅಶ್ಲೀಲ ಕಾಮೆಂಟ್ ಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.

ಈ ವಿಡಿಯೋ ಆಶಿಕಾ ರಂಗನಾಥ್ ಅವರ ವೈಯಕ್ತಿ ಗೌರವಕ್ಕೆ ಧಕ್ಕೆ ತಂದ ಬೆನ್ನಲ್ಲೇ, ಚಿತ್ರತಂಡ ಎಚ್ಚೆತ್ತುಕೊಂಡಿದ್ದು ನಟಿಯ ಕ್ಷಮೆಯಾಚಿಸಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಒಂದು ಚಿತ್ರ ಯಶಸ್ವಿಯಾಗಬೇಕಾದರೆ, ಉತ್ತಮ ಕಥೆ, ಉತ್ತಮ ನಟನೆ ಇರಬೇಕು. ಆದರೆ, ಉತ್ತಮ ಕಥೆಗಳೇ ಇಲ್ಲದ ಚಿತ್ರಗಳನ್ನು ತಯಾರಿಸಿ, ಜನರನ್ನು ಸೆಳೆಯಲು ಬೇಕಾ ಬಿಟ್ಟಿ ಪ್ರಮೋಷನ್ ಮಾಡಿದರೆ, ಅದರಲ್ಲಿ ನಟಿಸುತ್ತಿರುವ ನಟಿಯರ ಸ್ಥಿತಿ ಏನಾಗ ಬೇಕು ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಜೊತೆಗೆ ಯಾವುದೇ ಒಂದು ವಿಡಿಯೋ ಕಂಡು ಬಂದಾಗ ಅದರ ಬಗ್ಗೆ ಅಸಭ್ಯ ಕಾಮೆಂಟ್ ಮಾಡುವವರ ಮನಸ್ಥಿತಿಗಳ ಕುರಿತೂ ಆಕ್ರೋಶ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ