8 ತುಳು ಸಿನಿಮಾಗಳಲ್ಲಿ ನಟಿಸಿದ್ದ ಲೀಲಾವತಿ: “ಬಿಸತ್ತಿ ಬಾಬು” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು

ಮಂಗಳೂರು: ಹಿರಿಯ ನಟಿ ಲೀಲಾವತಿ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ಲೀಲಾವತಿ ಅವರಿಗೂ ತುಳು ಭಾಷೆಗೂ ಅವಿನಾಭಾವ ಸಂಬಂಧವಿದೆ.
ತುಳು ಭಾಷೆಯ 8 ಚಿತ್ರಗಳಲ್ಲಿ ಲೀಲಾವತಿ ಅವರು ನಟಿಸಿದ್ದರು. ಈ ಪೈಕಿ “ಬಿಸತ್ತಿ ಬಾಬು” ಎಂಬ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ದೊರಕಿದೆ.
ಈ ಬಗ್ಗೆ ಮಾತನಾಡಿರುವ ತುಳು ಚಿತ್ರರಂಗದ ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ, ಲೀಲಾವತಿ ಅವರ ಬಾಲ್ಯ ಬಹಳ ಕಷ್ಟಕರವಾಗಿತ್ತು. ಮನೆ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ಅವರನ್ನು ಕ್ರಿಶ್ಚಿಯನ್ ದಂಪತಿ ಸಾಕಿದರು. ತಮ್ಮ 16ನೇ ವರ್ಷದಲ್ಲಿ ಮಂಗಳೂರು ತೊರೆದು, ಮೈಸೂರು ತೊರೆದರು ಎಂದು ಅವರು ಹೇಳಿದರು.
ನಟನೆ ಮತ್ತು ನೃತ್ಯದಲ್ಲಿ ಅವರಿಗೆ ಅಪಾರ ಆಸಕ್ತಿ ಇತ್ತು. ದೊಡ್ಡ ನಟಿಯಾಗಿ ಬೆಳೆದರೂ ತುಳು ಭಾಷೆಯಲ್ಲಿ ಮೊದಲ ನಟಿ ಎನ್ನುವ ಕೀರ್ತಿ ಲೀಲಾವತಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಸಿಗಡಿ ಮೀನು, ಮರುವಾಯಿ ಮೀನಂದ್ರೆ ಲೀಲಾವತಿ ಅವರಿಗೆ ಪಂಚಪ್ರಾಣ ಮೀನು ಅಡುಗೆಯನ್ನು ಲೀಲಾವತಿ ಅವರು ಅತ್ಯಂತ ರುಚಿಕರವಾಗಿ ಮಾಡುತ್ತಿದ್ದರು. ಮಂಗಳೂರು ಭಾಗದಿಂದ ಯಾರಾದ್ರೂ ಲೀಲಾವತಿ ಅವರ ಮನೆಗೆ ಹೋದರೆ, ತುಳುವಿನಲ್ಲೇ ಮಾತನಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ವಿನೋದ್ ರಾಜ್ ಕುಮಾರ್ ಅವರು ತುಳುವಲ್ಲಿ ಸಿನಿಮಾ ಮಾಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಕಾಲ ಎಂಬ ಚಿತ್ರಕ್ಕೆ ವಿನೋದ್ ರಾಜ್ ಕುಮಾರ್ ಅವರಿಂದ ಹಾಡನ್ನು ಹಾಡಿಸಿದ್ದರು ಎಂದು ತಿಳಿಸಿದರು.