ತಾಯಿ ಕೋತಿಯನ್ನು ಬೇಟೆಯಾಡಿದ ಚಿರತೆ: ತಾಯಿ ಎದೆ ಅಪ್ಪಿಕೊಂಡೇ ಇದ್ದ ಮರಿ ಕೋತಿ - Mahanayaka
9:42 AM Wednesday 20 - August 2025

ತಾಯಿ ಕೋತಿಯನ್ನು ಬೇಟೆಯಾಡಿದ ಚಿರತೆ: ತಾಯಿ ಎದೆ ಅಪ್ಪಿಕೊಂಡೇ ಇದ್ದ ಮರಿ ಕೋತಿ

leopard
20/06/2022


Provided by

ಸಾಂಬಿಯಾ: ಕಾಡಿನಲ್ಲಿ ಪ್ರಾಣಿಗಳನ್ನು ನೋಡಲು ಪ್ರವಾಸಿಗರು ಹೋಗುತ್ತಾರೆ. ಪ್ರಾಣಿ ಪಕ್ಷಿಗಳ ಅಂದ ನೋಡಿ ಆನಂದಪಡುತ್ತಾರೆ. ಆದರ ಕಾಡಿನೊಳಗೆ ಎಲ್ಲ ದೃಶ್ಯಗಳು ಆನಂದಕರವಾಗಿರುವುದಿಲ್ಲ. ಕೆಲವು ದೃಶ್ಯಗಳು ನಮ್ಮ ಹೃದಯವನ್ನು ಕರಗಿಸುತ್ತದೆ.

ಹೌದು..! ಕೋತಿಯೊಂದನ್ನು ಚಿರತೆ ಬೇಟೆಯಾಡಿದ ಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕ ಶಫೀಕ್ ಮುಲ್ಲಾ ಎಂಬವರು ಕ್ಲಿಕ್ಕಿಸಿದ್ದು, ಈ ಚಿತ್ರ ನೋಡಿದವರ ಹೃದಯ ಕರಗಿದ್ದು,  ಈ ಚಿತ್ರವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಮರಿ ಕೋತಿ ತಾಯಿಯ ಎದೆಗೆ ಬಿಗಿದಪ್ಪಿಕೊಂಡಿದ್ದ ವೇಳೆಯೇ ತಾಯಿ ಕೋತಿಯನ್ನು ಚಿರತೆ ಬೇಟೆಯಾಡಿದೆ. ತಾಯಿ ಕೋತಿ ಸತ್ತು ಹೋದರೂ, ಮರಿಕೋತಿ ತಾಯಿಯ ಎದೆಯನ್ನು ಅಪ್ಪಿಕೊಂಡೇ ಇತ್ತು. ಇಂತಹ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಶಫೀಕ್ ಮುಲ್ಲಾ ಸೆರೆ ಹಿಡಿದಿದ್ದಾರೆ.

ತಾಯಿ ಸಾವನ್ನಪ್ಪಿದರೂ ತಾಯಿಯ ಎದೆಯನ್ನು ಅಪ್ಪಿಕೊಂಡಿದ್ದ ಮರಿ ಕೋತಿ ಕೊನೆಗೆ ತಾಯಿ ಕೋತಿಯನ್ನು ಬೇಟೆಯಾಡಿದ್ದ ಚಿರತೆಯ ಮರಿಗೆ ಆಹಾರವಾಗಿದೆ.

ಈ ದೃಶ್ಯ ನಿಜಕ್ಕೂ ಹೃದಯವಿದ್ರಾವಕವಾಗಿದೆ ಎಂದು ಛಾಯಾಗ್ರಾಹಕ ಶಫೀಕ್ ಮುಲ್ಲಾ ಹೇಳಿದ್ದಾರೆ.  ನಾವು ಚಿರತೆಯ ಬೇಟೆಯನ್ನು ಸೆರೆ ಹಿಡಿಯಲು ಹೋಗಿದ್ದೆವು. ಈ ಸಂದರ್ಭದಲ್ಲಿ ಇಂತಹದ್ದೊಂದು ನೋವಿನ ದೃಶ್ಯ ನಮ್ಮ ಕಣ್ಣಿಗೆ ಬಿದ್ದಿದೆ. ಈ ಘಟನೆಯಿಂದ ನಮಗೆ ತುಂಬಾ ನೋವಾಗಿದೆ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರು-ಕೆಎಸ್ಸಾರ್ಟಿಸಿ ಬಸ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಪ್ರವಾಹ ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸರು ಸಾವು!

ಇಂದು ಮಧ್ಯಾಹ್ನ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನ: ಏನೇನು ಕಾರ್ಯಕ್ರಮವಿದೆ?

ಪ್ರತಿಮೆಗಳ ಜೊತೆಗೆ ಇವರು ಹೇಗೆಲ್ಲ ಫೋಟೋ ತೆಗೆದುಕೊಳ್ಳುತ್ತಾರೆ ನೋಡಿ!

ಇತ್ತೀಚಿನ ಸುದ್ದಿ