ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಜನ
06/11/2023
ಬ್ರಹ್ಮಾವರ: ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಡಿಮಠ ಬಸ್ ನಿಲ್ದಾಣದ ಬಳಿ ಅರಣ್ಯ ಇಲಾಖೆಯಿಂದ ಇರಿಸಲಾದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿದೆ.
ಈ ಪರಿಸದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಓಡಾಟ ಇರುವ ಬಗ್ಗೆ ಸ್ಥಳೀಯರು, ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಮೂರು ದಿನಗಳ ಹಿಂದೆ ಇಲ್ಲಿ ಇಲಾಖೆಯಿಂದ ಬೋನನ್ನು ಇರಿಸಲಾಗಿತ್ತು. ಆಹಾರ ಅರಸಿಗೊಂಡು ನಾಡಿಗೆ ಬಂದ ಚಿರತೆಯೊಂದು ಇಂದು ಬೆಳಗಿನ ಜಾವ ಬೋನಿನಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಚಿರತೆ ಯನ್ನು ರಕ್ಷಿಸಿದರು. ಇದು 3-4ವರ್ಷ ಪ್ರಾಯದ ಗಂಡು ಚಿರತೆಯಾಗಿದೆ.
ಕಾರ್ಯಾಚರಣೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ಹರೀಶ್ ಕೆ., ಗುರುರಾಜ್, ಸುರೇಶ್ ಗಾಣಿಗ, ಗಸ್ತು ಅರಣ್ಯ ಪಾಲಕರಾದ ಸುರೇಶ್, ಮಂಜುನಾಥ್ ನಾಯಕ್, ಅಭಿಲಾಷ್, ಜಿತೇಶ್, ಅಶ್ವಿನ್ ಮೊದಲಾದವರು ಪಾಲ್ಗೊಂಡಿದ್ದರು.




























