ಇಬ್ಬರ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಚಿರತೆಯ ಮೃತದೇಹ ಪತ್ತೆ: ಅನುಮಾನಕ್ಕೆ ಕಾರಣವಾಯ್ತು ಚಿರತೆಯ ನಿಗೂಢ ಸಾವು

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ಬೆಳಗ್ಗೆ ಚಿರತೆಯೊಂದು ಇಬ್ಬರ ಮೇಲೆ ಅಟ್ಯಾಕ್ ಮಾಡಿತ್ತು. ಸ್ಥಳೀಯರು ಕಲ್ಲಿನಿಂದ ಹೊಡೆದು ಚಿರತೆಯನ್ನ ಓಡಿಸಿದ್ದರು. ಆದರೆ, ಸಂಜೆ ವೇಳೆಗೆ ಮದಗದಕೆರೆ ದಡದಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೆರೆ ದಡದಲ್ಲಿ ಸಿಕ್ಕಿರೋ ಚಿರತೆ ಜನ ಕಲ್ಲಿನಿಂದ ಹೊಡೆದಿರೋ ಚಿರತೆಯೋ ಅಥವಾ ಇದು ಬೇರೆ ಚಿರತೆಯೋ ಎಂಬ ಸಂಶಯ ಉಂಟಾಗಿದೆ. ಸ್ಥಳೀಯರು ಅದು ಬೇರೆ ಚಿರತೆ. ಮನುಷ್ಯರ ಮೇಲೆ ದಾಳಿ ಮಾಡಿದ್ದ ಚಿರತೆ ಕಾಡಿನಲ್ಲಿ ಓಡಿ ಹೋಗಿದೆ. ಅದನ್ನ ಸ್ಥಳೀಯರು ನೋಡಿದ್ದಾರೆ. ಕೆರೆಯಲ್ಲಿ ಮೃತದೇಹ ಸಿಕ್ಕಿರೋ ಚಿರತೆಯೇ ಬೇರೆ ಎಂದಿದ್ದಾರೆ.
ಆದರೆ, ಸ್ಥಳಿಯರು ಇಂದು ಬೆಳಗಿನ ಜಾವ ಅರಣ್ಯ ಇಲಾಖೆ ಅಧಿಕಾರಿಗಳೇ ಜೀಪಿನಲ್ಲಿ ತಂದು 2 ಚಿರತೆ ಬಿಟ್ಟು ಹೋಗಿದ್ದಾರೆ. ಆ ಎರಡು ಚಿರತೆಗಳು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಹಿಡಿದ ಚಿರತೆಗಳು. ಅವುಗಳನ್ನ ತಂದು ಚುರ್ಚೆಗುಡ್ಡ ಅರಣ್ಯ ಪ್ರದೇಶಕ್ಕೆ ಬಿಟ್ಟು ಹೋಗಿದ್ದಾರೆ. ಅದರಲ್ಲಿ ಒಂದು ಚಿರತೆ ಕೆರೆಗೆ ಬಿದ್ದು ಸಾವನ್ನಪ್ಪಿದೆ. ಇನ್ನೊಂದು ಇಬ್ಬರ ಮೇಲೆ ದಾಳಿ ಕಾಡಿನಲ್ಲಿ ತಪ್ಪಿಸಿಕೊಂಡು ಹೋಗಿದೆ ಎಂದು ಆರೋಪಿಸಿದ್ದಾರೆ.
ಆದರೆ, ಇದು ಜನ ಕಲ್ಲು ಬೀಸಿದ ಚಿರತೆಯೋ ಅಥವ ಬೇರೆಯದ್ದೋ ಎಂದು ಅಧಿಕಾರಿಗಳಿಗೆ ಗೊಂದಲವಾಗಿದೆ. ಚಿರತೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿರೋ ಅಧಿಕಾರಿಗಳು ಪರೀಕ್ಷೆಯ ಬಳಿಕ ಚಿರತೆ ಸಾವಿಗೆ ಕಾರಣವೇನು, ನದಿಗೆ ಬಿದ್ದು ಸತ್ತಿರೋದ, ಸ್ಥಳಿಯರು ಕಲ್ಲಿನಿಂದ ಹೊಡೆದ ಚಿರತೆಯೋ ಅಥವ ಬೇರೆ ಕಡೆ ಸಾಯಿಸಿ ತಂದು ಕೆರೆಗೆ ಎಸೆದಿರೋದ ಎಂಬುದು ಸ್ಪಷ್ಟವಾಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD