ಯುದ್ಧ ಗೆದ್ದು ಬರಲಿ ಭಾರತ: ಕೊಟ್ಟಿಗೆಹಾರದಲ್ಲಿ ವಿಶೇಷ ಪೂಜೆ - Mahanayaka

ಯುದ್ಧ ಗೆದ್ದು ಬರಲಿ ಭಾರತ: ಕೊಟ್ಟಿಗೆಹಾರದಲ್ಲಿ ವಿಶೇಷ ಪೂಜೆ

chikkamagaluru
08/05/2025


Provided by

ಕೊಟ್ಟಿಗೆಹಾರ, ಅತ್ತಿಗೆರೆ: ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಕೊಟ್ಟಿಗೆಹಾರ ಹತ್ತಿರದ ಅತ್ತಿಗೆರೆ ಗ್ರಾಮದಲ್ಲಿ ಭಾರತೀಯ ಸೇನೆಗೆ ಶಕ್ತಿ ಸಿಗಲೆಂದು ಹಾಗೂ ಭಾರತ ಯುದ್ಧದಲ್ಲಿ ಗೆಲುವು ಸಾಧಿಸಲೆಂದು ವಿಶೇಷ ಪೂಜೆ ನಡೆಸಲಾಯಿತು.

ಅತ್ತಿಗೆರೆ ಗ್ರಾಮದ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ಸೇರಿ ಪೂಜಾ ಕಾರ್ಯಕ್ರಮ ನಡೆಸಿದರು. ವಿಶೇಷ ಹೋಮ, ಅಭಿಷೇಕ, ಹಾಗೂ ಅರ್ಥಶಾಂತಿ ಯಾಗದ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ದೇಶದ ರಕ್ಷಣೆಗಾಗಿ ಶ್ರದ್ಧಾಪೂರ್ವಕವಾಗಿ ಹಾರೈಸಿದರು.

ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳೂ ಸಹ ಭಾಗವಹಿಸಿದ್ದ ಈ ಪೂಜಾ ಕಾರ್ಯಕ್ರಮದಲ್ಲಿ ದೇಶಭಕ್ತಿಯ ಭಾವನೆ ಉಕ್ಕಿ ಹರಿದುಬಂದಿತು. “ಸೈನಿಕರ ಧೈರ್ಯವರ್ಧನೆಗೆ ಇದು ನಮ್ಮ ಕಡೆಯಿಂದ ಸಣ್ಣ ಕೊಡುಗೆ,” ಎಂದು ಗ್ರಾಮಸ್ಥರಾದ ನಾಗೇಶ್ ಗೌಡ ಹೇಳಿದರು.

ದೇಶಕ್ಕಾಗಿ ಹೋರಾಡುತ್ತಿರುವ ಯೋಧರಿಗೆ ಈ ಪ್ರಾರ್ಥನೆ ಶಕ್ತಿ ನೀಡಲಿ ಎಂಬದು ಎಲ್ಲರ ಆಶಯವಾಗಿದೆ.ಇದೊಂದು ದೇಶಭಕ್ತಿಯ ನಿದರ್ಶನವಾಗಿದ್ದು, ಇಡೀ ಗ್ರಾಮದಲ್ಲಿ ದೇಶದ ಪರ ಭಕ್ತಿಯ ಚೈತನ್ಯ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ