ಸಂಸತ್ ದಾಳಿಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ - Mahanayaka
3:35 AM Sunday 14 - September 2025

ಸಂಸತ್ ದಾಳಿಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ

priyank kharge
14/12/2023

ಬೆಳಗಾವಿ: ಸಂಸತ್ ದಾಳಿಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.


Provided by

ಸುವರ್ಣ ಸೌಧದಲ್ಲಿ ಮಾತನಾಡಿರುವ ಅವರು, ಸಂಸತ್ ದಾಳಿಯನ್ನು ಯಾರೇ ಮಾಡಿದರೂ ಖಂಡನೀಯ ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.

ಈ ಲೋಪಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿರುವ ಪ್ರಿಯಾಂಕ್, ಇದೇ ಪಾಸ್ ನ್ನು ನಮ್ಮವರು ಕೊಟ್ಟಿರುತ್ತಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ದೇಶ ದ್ರೋಹಿ ಹಣೆಪಟ್ಟಿ ಕಟ್ಟುತ್ತಿದ್ದರು ಎಂದು ಅವರು ಹೇಳಿದರು.

ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಸ್ಪಷ್ಟನೆ ನೀಡಲಿ, ಪಾಸ್ ಕೊಟ್ಟ ಮೈಸೂರು ಸಂಸದರನ್ನು ಯಾಕೆ ಇನ್ನೂ ವಿಚಾರಣೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ